ರಸ್ತೆಗೆ ಚರಂಡಿಯ ಕೊಳಚೆ ನೀರು ವಿಜಯನಗರ ಬಡಾವಣೆಯ ಸ್ಥಳೀಯರ ಆಕ್ರೋಶ

ವಿಜಯನಗರ ಬಡಾವಣೆಯಲ್ಲಿ ಚರಂಡಿ ಕೊಳಚೆ ನೀರು
ವಿಜಯನಗರ ಬಡಾವಣೆಯಲ್ಲಿ ಚರಂಡಿ ಕೊಳಚೆ ನೀರು
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಬಡಾವಣೆಯಲ್ಲಿನ ಹಾರೋಹಳ್ಳಿ ಗಾರ್ಡನ್ ಬಳಿ ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿಯುತ್ತಿದ್ದು, ರಸ್ತೆಯ ಮೇಲೆ ನೀರು ನಿಂತಿದ್ದು, ಸಾರ್ವಜನಿಕರು ಓಡಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಇಂದು ನೆನೆನಯ ಕಥೆಯಲ್ಲ. ಕಳೆದ ೬ ತಿಂಗಳಿAದ ಸುತ್ತಮುತ್ತ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದು, ಇದುವರೆವಿಗೂ ಗ್ರಾಮಪಂಚಾಯ್ತಿಯಾಗಲೀ, ತಾಲ್ಲೂಕು ಆಡಳಿತವಾಗಲಿ ಗಮನ ಹರಿಸಿಲ್ಲ. ಮಂದಗತಿಯಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಮೋರಿ ನಿರ್ಮಾಣ ಕಾಮಗಾರಿಯೇ ಇದಕ್ಕೆ ಕಾರಣವಾಗಿದ್ದು, ಗುತ್ತಿಗೆದಾರ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಶುಕ್ರವಾರ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಚರಂಡಿಗಳ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ಬಂದಾಗ ಪ್ರತಿ ಬಾರಿಯೂ ನೀರು ರಸ್ತೆಯ ಮೇಲೆ ನಿಲ್ಲುವಂತಾಗಿದೆ. ಇದರಿಂದ ರಸ್ತೆ ಮೇಲೆ ಓಡಾಡುವ ವಯೋವೃದ್ಧರು, ಶಾಲಾ ಮಕ್ಕಳು ನೀರಿನೊಳಗೆ ಬೀಳುವಂತೆ ಆಗಿದೆ. ರಸ್ತೆಯಲ್ಲಿ ಓಡಾಡುವ ಶಾಲಾ ವಾಹನಗಳು ಮತ್ತು ಇತರೆ ವಾಹನಗಳಿಗೂ ತೊಂದರೆಯಾಗಿದ್ದು, ವಾಹನಗಳು ಓಡಾಡುವ ಸಂದರ್ಭದಲ್ಲಿ ರಸ್ತೆ ಮೇಲಿನ ಕೊಳಚೆ ನೀರು ಅಕ್ಕಪಕ್ಕದಲ್ಲಿರುವ ಮನೆಗಳ ಮೇಲೆ ಎರಚಿ ಸ್ವಚ್ಛತೆ ಇಲ್ಲದಂತೆ ಆಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ರಸ್ತೆ ಪಕ್ಕದಲ್ಲಿರುವ ಮೋರಿಯಲ್ಲಿ ಕೊಳಚೆ ನೀರು ತುಂಬಿದ್ದು, ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಕೊಳಚೆ ನೀರಿನ ಜೊತೆ ತ್ಯಾಜ್ಯವೂ ತುಂಬಿಕೊAಡಿದೆ. ಹೀಗಾಗಿ ನೀರು ಉಕ್ಕಿ ರಸ್ತೆಗೆ ಹರಿಯುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ರಸ್ತೆಯ ಅಕ್ಕಪಕ್ಕಗಳಲ್ಲಿ ವಾಸದ ಮನೆಗಳು ಇರುವುದರಿಂದ ನೀರಿನ ಜೊತೆಗೆ ತ್ಯಾಜ್ಯ ಕೊಳೆತು ದುರ್ವಾಸನೆ ಬರುವಂತಾಗಿದೆ. ಮನೆಗಳಲ್ಲಿ ಊಟ, ತಿಂಡಿ ಮಾಡಲು ಸಾಧ್ಯವಾಗುತ್ತಿಲ್ಲ. ಕೊಳಚೆ ನೀರು ಬಹಳ ದಿನಗಳಿಂದ ಒಂದೇ ಕಡೆ ನಿಂತಿರುವುದರಿAದ ಸೊಳ್ಳೆ ಕಾಟ ಹೆಚ್ಚಿದ್ದು, ರೋಗಗಳು ಬರುವ ಆತಂಕ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಕೋಟ್
ಕೆಲ ತಿಂಗಳ ಹಿಂದೆ ಶಾಸಕ ಕೊತ್ತೊರು ಮಂಜುನಾಥ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ಹೋಗಿದ್ದರು. ನಮ್ಮ ಬಡಾವಣೆಯ ಚರಂಡಿ ವ್ಯವಸ್ಥೆ ಸರಿಹೋಗುತ್ತದೆ ಎಂದು ಖುಷಿಯಾಗಿತ್ತು. ಆದರೆ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಮನೆಗಳವರಿಗೆ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮನೆಗಳ ಮುಂದೆ ಇರುವ ನೀರಿನ ಟ್ಯಾಂಕ್‌ಗಳಿಗೂ ಕೊಳಚೆ ನೀರು ನುಗ್ಗುತ್ತವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ನೆನಗುದಿಗೆ ಬಿದ್ದಿರುವ ಕಾಮಗಾರಿಯನ್ನು ಚುರುಕುಗೊಳಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ.
-ಪುಷ್ಪಾ ಬಾಬು, ಗ್ರಾ.ಪಂ. ಸದಸ್ಯೆ, ಕೊಂಡರಾಜನಹಳ್ಳಿ
ಪ್ರತಿಭಟನೆಯಲ್ಲಿ ಸ್ಥಳೀಯರಾದ ಆನಂದ್, ಉಮಾ, ರುಕ್ಮಿಣಿ, ಋತುಶ್ರೀ, ಕಾವ್ಯ, ಮರಿಯಪ್ಪ, ರಘು, ವಿಕಾಸ್ ಜಯರಾಮ್ ಮುಂತಾದವರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net