ವಿಡಿಯೋದಲ್ಲಿ ರಸ್ತೆ ಮಧ್ಯೆ ನಿಂತ ಕಾರಿನ ಬಾಗಿಲು ತೆಗೆದು ವ್ಯಕ್ತಿಯೊಬ್ಬ ಮಲಗಿದ್ದ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಹಿಂಬದಿಯ ಕಾರು ಹಾರನ್ ಮಾಡಿದಾಗ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ ಎದ್ದು ಕಾರು ಹತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರ್ಮಿಕ ಕ್ಷೇತ್ರಕ್ಕೆ ಬರುವಾಗ ಮದ್ಯಪಾನ ಮಾಡಿ ಬಂದು ಈ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲವೆಂಬ ಆಕ್ರೋಶ ವ್ಯಕ್ತವಾಗಿದೆ.