ಗುರುಮಠಕಲ್‌ನಲ್ಲಿ ಕೇಂದ್ರ ಬೋರ್ಡ್ ಕಂಪ್ಯೂಟರ್ ಶಿಕ್ಷಣ ಕೌಶಲ ಭಾರತ ಹಾಗೂ ಸ್ಪೀಕ್‌ನೌ ತರಬೇತಿ ಕೇಂದ್ರದಿAದ ಬುಧವಾರ ವಿಶ್ವ ಯುವ ಕೌಶಲ ದಿನ ಆಚರಿಸಲಾಯಿತು. ಹುಸೇನಪ್ಪ ಸಕ್ರಿ, ಮಲ್ಲಿಕಾರ್ಜುನ ಚಪೆಟ್ಲಾ, ವೆಂಕಟೇಶ, ನಾಗರತ್ನ, ಅರ್ಚನಾ, ಅಕ್ಷತಾ ರೆಡ್ಡಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಯಶಸ್ವಿ ಕೈಗಾರಿಕೆಗೆ ಕೌಶಲಯುತ ಮಾನವಸಂಪನ್ಮೂಲವೇ ಜೀವಾಳ!
ಕೌಶಲ ಕಾರ್ಮಿಕರಿಲ್ಲದೆ ಕೈಗಾರಿಕಾ ಪ್ರಗತಿ ಅಸಾಧ್ಯ!
ಗುರುಮಟಕಲ್: ಯಾವುದೇ ಒಂದು ಕೈಗಾರಿಕೆ ಯಶಸ್ಸು ಗಳಿಸಬೇಕಾದರೆ ಕೌಶಲ ಕಾರ್ಮಿಕರ ಅಗತ್ಯವಾಗಿದೆ ಎಂದು ಶಿಕ್ಷಕ ಹುಸೇನಪ್ಪ ಸಕ್ರಿ ಹೇಳಿದರು.
ಪಟ್ಟಣದಲ್ಲಿ ಕೇಂದ್ರ ಬೋರ್ಡ್ ಕಂಪ್ಯೂಟರ್ ಶಿಕ್ಷಣ ಕೌಶಲ ಭಾರತ ಹಾಗೂ ಸ್ಪೀಕ್‌ನೌ ತರಬೇತಿ ಕೇಂದ್ರದಿAದ ಬುಧವಾರ ಹಮ್ಮಿಕೊಂಡ ವಿಶ್ವ ಯುವ ಕೌಶಲ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ವಿಶ್ವದಲ್ಲಿಯೇ ಅತಿಹೆಚ್ಚು ಯುವ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ದೇಶದ ಸಮಗ್ರ ಅಭಿವೃದ್ಧಿಗೆ ನುರಿತ ಯುವಶಕ್ತಿ ಅಗತ್ಯವಾಗಿದ್ದು, ಅಲ್ಲದೆ ಕೈಗಾರಿಕೆಗಳ ಯಶಸ್ಸಿಗೆ ಮೂಲಸೌಕರ್ಯದ ಜತೆಗೆ ಕೌಶಲಯುತ ನುರಿತ ಕಾರ್ಮಿಕರು ಕೂಡ ಅಷ್ಟೇ ಪ್ರಮುಖವಾಗಿದೆ ಎಂದರು.
ಕೇAದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ವಿವಿಧ ಸಂಘ-ಸAಸ್ಥೆಗಳು ಜÁರಿಗೊಳಿಸಿರುವ ಕೌಶಲ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ಯೋಜನೆಗಳನ್ನು ಯುವಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಣ ಬಹಳ ಅಗತ್ಯವಾಗಿದೆ. ಹೀಗಾಗಿ ಕೌಶಲ ಪಡೆದರೆ ಮಾತ್ರ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ ಎಂದು ಹೇಳಿದರು. ಈ ವೇಳೆ ಮಲ್ಲಿಕಾರ್ಜುನ ಚಪೆಟ್ಲಾ, ವೆಂಕಟೇಶ, ನಾಗರತ್ನ, ಅರ್ಚನಾ, ಅಕ್ಷತಾ ರೆಡ್ಡಿ ಇತರರಿದ್ದರು.