ಕ್ಷೇತ್ರದ ಹಿತದೃಷ್ಟಿಯಿಂದ ಎಸ್ಜೆಪಿ&ಜೆಡಿಎಸ್ ಸೇರ್ಪಡೆ SJP & JDS
ಕ್ಷೇತ್ರದ ಹಿತದೃಷ್ಟಿಯಿಂದ ಎಸ್ಜೆಪಿ&ಜೆಡಿಎಸ್ ಸೇರ್ಪಡೆ SJP & JDS
Published on:
Copied
Follow Us
ಮಾಲೂರು: ತಾಲೂಕಿನಲ್ಲಿ ಪ್ರಸ್ತುತ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಣ್ಣ ಕೆಲಸಗಳಿಗೂ ಜನ ಸಾಮಾನ್ಯರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಸರಿಗಷ್ಟೇ ಅಭಿವೃದ್ಧಿಯಾಗುತ್ತಿದ್ದು, ಜನರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿದ್ದು, ನಾವು ಚದುರಿ ಹೋದರೆ ನಮಗೇ ನಷ್ಟ ಎಂದು ಜೆಡಿಎಸ್ ಮುಖಂಡ ಜಿ.ಇ. ರಾಮೇಗೌಡ ಹೇಳಿದರು.SJP & JDS
ಸ್ವಾಭಿಮಾನಿ ಜನತಾ ಪದ ಸಂಸ್ಥಾಪಕ ಅಧ್ಯ ಹೂಡಿ ವಿಜಯ್ ಕುಮಾರ್ ಅವರು ಜೆಡಿಎಸ್ ಸೇರುತ್ತಿರುವ ಕುರಿತು ನಗರದ ವೈಟ್ ಗಾರ್ಡನ್ ನಿವಾಸದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್ಜೆಪಿ&ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನ ಹಿರಿಯರು ಮತ್ತು ಯುವಕರ ಆಶಯದಂತೆ ನಾವು ಒಂದಾಗಿದ್ದೇವೆ. ಜೆಡಿಎಸ್ ವರಿಷ್ಠರ ಒಪ್ಪಿಗೆಯ ಮೇರೆಗೆ ತಾಲೂಕಿನ ಹಿತದೃಷ್ಟಿಯಿಂದ ನಾವಿಬ್ಬರೂ ಒಂದಾಗಿ ಹೋಗಲು ನಿರ್ಧರಿಸಿದ್ದೇವೆ. ರಾಜ್ಯದಲ್ಲಿ ಬಿಜೆಪಿ&ಜೆಡಿಎಸ್ ಮೈತ್ರಿಯಿದ್ದರೂ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಮಾ.5 ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಹೂಡಿ ವಿಜಯ್ ಕುಮಾರ್ ಅವರು ಅಧಿಕೃತವಾಗಿ ಜೆಡಿಎಸ್ಗೆ ಸೇರಲಿದ್ದಾರೆ ಎಂದರು.
ಸ್ವಾಭಿಮಾನಿ ಜನತಾ ಪದ ಅಧ್ಯ ಹೂಡಿ ವಿಜಯ್ ಕುಮಾರ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲೆಶ್ ಬಾಬು ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೆವು. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡ ಅವರು ಪಕ್ಕೆ ಆಹ್ವಾನ ನೀಡಿದ್ದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಕಾರ್ಯಕರ್ತರಿಗೆ ಸೂಕ್ತ ಅಧಿಕಾರ ಮತ್ತು ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಸ್ವಾಭಿಮಾನಿ ಜನತಾ ಪದ ತಾಲೂಕು ಅಧ್ಯ ಆರ್.ಪ್ರಭಾಕರ್, ಜೆಡಿಎಸ್ ತಾಲೂಕು ಅಧ್ಯ ಬಲ್ಲಹಳ್ಳಿ ನಾರಾಯಣಸ್ವಾಮಿ, ಮಾಜಿ ಪುರಸಭೆ ಅಧ್ಯ ರಾಮಮೂರ್ತಿ, ಬಿಆರ್ ವೆಂಕಟೇಶ್, ಮಾಜಿ ಪುರಸಭೆ ಸದಸ್ಯ ಕುಟ್ಟಿ, ಕೂರಿ ಮಂಜು ಇತರರು ಇದ್ದರು.