ಭಕ್ತಿ ಸಂಭ್ರಮದ ಸೀತಾರಾಮ ಕಲ್ಯಾಣೋತ್ಸವ

ಶಹಾಪುರದಲ್ಲಿ ಸೀತಾರಾಮ ಕಲ್ಯಾಣ ಮಹೋತ್ಸವ ಸಮಿತಿ ರಾಮನವಮಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಸೀತಾರಾಮ ಕಲ್ಯಾಣೋತ್ಸವದಲ್ಲಿ ಪೂಜ್ಯ ಪಣೀಂದ್ರ ಜೀ, ಅಂಬರೀಶಗೌಡ ದರ್ಶನಾಪುರ, ಅಮೀನರೆಡ್ಡಿ ಯಾಳಗಿ, ಶರಣು ಗದ್ದುಗೆ ಇತರರಿದ್ದರು.
ಶಹಾಪುರದಲ್ಲಿ ಸೀತಾರಾಮ ಕಲ್ಯಾಣ ಮಹೋತ್ಸವ ಸಮಿತಿ ರಾಮನವಮಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಸೀತಾರಾಮ ಕಲ್ಯಾಣೋತ್ಸವದಲ್ಲಿ ಪೂಜ್ಯ ಪಣೀಂದ್ರ ಜೀ, ಅಂಬರೀಶಗೌಡ ದರ್ಶನಾಪುರ, ಅಮೀನರೆಡ್ಡಿ ಯಾಳಗಿ, ಶರಣು ಗದ್ದುಗೆ ಇತರರಿದ್ದರು.
Published on
ಶಹಾಪುರ: ರಾಮ ರಾಜ್ಯ ಎಂಬುದು ಆದರ್ಶ ಆಡಳಿತದ ಸಂಕೇತವಾಗಿದ್ದು, ಶ್ರೀರಾಮನ ಜೀವನ ನಮಗೆ ಸತ್ಯ, ಪ್ರಾಮಾಣಿಕತೆ, ತ್ಯಾಗ ಮತ್ತು ಧರ್ಮಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುತ್ತದೆ ಎಂದು ಪೂಜ್ಯ ಫಣೀಂದ್ರ ಜಿ ಹೇಳಿದರು.
ನಗರದ ಕೈಗಾರಿಕಾ ಬಡಾವಣೆಯಲ್ಲಿ ರಾಮನವಮಿ ನಿಮಿತ್ತ ಸೀತಾರಾಮ ಕಲ್ಯಾಣೋತ್ಸವ ಸಂಟನಾ ಸಮಿತಿಯಿಂದ ಶುಕ್ರವಾರ ನಡೆದ ಸೀತಾರಾಮ ಕಲ್ಯಾಣೋತ್ಸವ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಶ್ರೀರಾಮಚಂದ್ರರು ಪೂಜ್ಯನಿಯರಾಗಿದ್ದು, ಮಾನವನಿಗೆ ಆದರ್ಶ ಜೀವನದ ಮಾರ್ಗ ತೋರಿದ ಮಾರ್ಗದರ್ಶಕರಾಗಿದ್ದಾರೆ. ಕಲ್ಯಾಣೋತ್ಸವದಿಂದ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ ಎಂದರು. ಉತ್ಸವಮೂರ್ತಿಗೆ ಅಭಿಷೇಕ, ಮಂಗಳಾರತಿ, ಮಹಾನೈವಿದ್ಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಅಂಬರೀಶಗೌಡ ದರ್ಶನಾಪುರ, ಅಮೀನರೆಡ್ಡಿ ಯಾಳಗಿ, ಶರಣುಗದ್ದುಗೆ, ಸಿದ್ದಣ್ಣ ಆರಬೋಳ, ಬಸವರಾಜಪ್ಪಗೌಡ ತಂಗಡಗಿ, ಶಿವಯೋಗಿ ಹಿರೇಮಠ, ಬಸನಗೌಡ ಮರ್ಕಲ್​ ಹಾಗೂ ಸಮಿತಿ ಪ್ರಮುಖರಾದ ಕಮ್ಮಕೃಷ್ಣ, ಟಿ.ನಾಗೇಶ್ವರರಾವ, ಕೆ.ರಾಮ್​ಬಾಬು, ಕೆ.ರವೀಂದ್ರನಾಥ ಚೌಧರಿ, ಪೂರ್ಣಯ್ಯ, ವೆಂಕಣ್ಣ ಬಾಬು, ಭೀಮಯ್ಯ, ವೆಂಕಟರಾವ.ಕೆ, ರವಿಕುಮಾರ್​ ಪಟ್ಟಾಭಿ, ರಾಜೇಶ, ಜಯಬಾಬು, ಶ್ರೀನಿವಾಸರಾವ.ಕೆ, ರಾಮಲಿಂಗೇಶ್ವರರಾವ, ಬೊಬ್ಬ ಶ್ರೀನಿವಾಸರಾವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net