20ರಿಂದ ಜಿಲ್ಲೆಯಲ್ಲಿ ಎಸ್​ಐಆರ್​ SIR

20ರಿಂದ ಜಿಲ್ಲೆಯಲ್ಲಿ ಎಸ್​ಐಆರ್​ SIR
20ರಿಂದ ಜಿಲ್ಲೆಯಲ್ಲಿ ಎಸ್​ಐಆರ್​ SIR
Published on
ಬೆಂಗಳೂರು ಗ್ರಾಮಾಂತರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.20 ರಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​)ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್​.ಅನುರಾಧಾ ತಿಳಿಸಿದರು.SIR
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮತಪಟ್ಟಿಯಲ್ಲಿ ಅರ್ಹ ಮತದಾರರ ಸೇರ್ಪಡೆ, ಅರ್ಹರು ಪಟ್ಟಿಯಿಂದ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಲು ಹಾಗೂ ಮುಕ್ತ, ನಿಷ್ಪಪಾತ ಚುನಾವಣೆ ನಡೆಸಲು, ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಂಡಿದೆ ಎಂದರು.
ವಿಶೇಷ ಸಮಗ್ರ ಪರಿಷ್ಕರಣೆಯು ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತೆಗೆಯುವುದು. ವಿವಿಧ ಕಾರಣಗಳಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡ ಮತದಾರರು, ವಲಸಿಗ ಮತದಾರರು ಹಾಗೂ ಎರಡಕ್ಕೂ ಹೆಚ್ಚು ಕಡೆ ಹೆಸರಿರುವ ಮತದಾರರು ಹಾಗೂ ಭಾರತೀಯ ನಾಗರಿಕರಲ್ಲದವರಿಗೆ ಮತದಾನಹಕ್ಕು ಇಲ್ಲದ ಕಾರಣ ಅವರ ಹೆಸರು ತೆಗೆಯಲಾಗುವುದು ತಿಳಿಸಿದರು.
ಬಿಎಲ್​ಒಗಳ ಭೇಟಿ: 2026ರ ಅ.1 ಅರ್ಹತಾ ದಿನಾಂಕಮಾನದಂಡವಾಗಿಟ್ಟುಕೊಂಡು ಸಮಗ್ರ ಪರಿಷ್ಕರಣೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಜೂ. 20 ರಿಂದ 29ರವರೆಗೆ ಸಿದ್ಧತೆ, ತರಬೇತಿ, ನಮೂನೆ ಮುದ್ರಣ ಕಾರ್ಯ ನಡೆಯಲಿದೆ. ಜೂ.30 ರಿಂದ ಜು.29ರವರೆಗೆ ಬೂತ್​ಮಟ್ಟದ ಅಧಿಕಾರಿಗಳು (ಬಿಎಲ್​ಒ) ಮನೆ&ಮನೆಗೆ ಭೇಟಿ ನೀಡಲಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು. ಅ.7ರಂದು ಅಂತಿಮ ಪಟ್ಟಿ ಪ್ರಕಟ ಮತಗಟ್ಟೆಗಳ ಮರುವಿಂಗಡಣೆ ಪ್ರಕ್ರಿಯೆ ಜು.29ರೊಳಗೆ ಪೂರ್ಣಗೊಳ್ಳಲಿದೆ. ಆ.5ರಂದು ಕರಡು ಮತದಾರರ ಪಟ್ಟಿಪ್ರಕಟಿಸಲಾಗುತ್ತದೆ. ಆ.5ರಿಂದ ಸೆ.4ರ ವರೆಗೆ ಹಕ್ಕು ಹಾಗೂ ಆೇಪಣೆಗಳ ಸಲ್ಲಿಕೆಗೆ ಅವಕಾಶವಿದೆ. ಆ.5 ರಿಂದ ಅ. 3 ರವರೆಗೆ ಆೇಪಣೆಗಳನ್ನು ವಿಲೇವಾರಿ ಮಾಡಲಾಗುತ್ತದೆ. ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ನಾಲ್ವರು ನೋಂದಣಾಧಿಕಾರಿಗಳು: ಜಿಲ್ಲೆಗೆ ಸಂಬಂಧಿಸಿದಂತೆ 4 ವಿಧಾನಸಭಾ ೇತ್ರಗಳಿದ್ದು, ನಾಲ್ವರು ಮತದಾರರ ನೋಂದಣಾಧಿಕಾರಿಗಳು, 8 ಮಂದಿ ಸಹಾಯಕ ಮತದಾರ ನೋಂದಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಈ ಎಲ್ಲರಿಗೂ ಈಗಾಗಲೇ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ 1,141 ಮತಗಟ್ಟೆಗಳಿದ್ದು 1,141 ಮತಗಟ್ಟೆಗಳಿಗೆ ಬಿಎಲ್​ಒಗಳುಮತ್ತು 10 ರಿಂದ 12 ಮತಗಟ್ಟೆಗಳಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿರುತ್ತದೆ. ಮೊದಲನೇ ಹಂತದಲ್ಲಿ ಬಿಎಲ್​ಒ ಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಜತೆಗೆ ಗ್ರಾಮ ಪಂಚಾಯಿತಿ ಹಾಗೂ ತಾಲೂಕುಮಟ್ಟದಲ್ಲಿ ಬಿಎಲ್​ಒ ಸೌಲಭ್ಯ ಕೇಂದ್ರ ತೆರೆಯಲಾಗಿದೆ ಎಂದು ಡಿಸಿ ತಿಳಿಸಿದರು.
ಮನೆ ಬಾಗಿಲಿಗೆ 3 ಬಾರಿ ಭೇಟಿ: ಬಿಎಲ್​ಒಗಳು ಮತದಾರರಿಂದ ಫಾಮ್​ರ್ಸಂಗ್ರಹಿಸಲು 3 ಬಾರಿ ಭೇಟಿ ನೀಡಲಿದ್ದಾರೆ. ಮನೆ ಬೀಗ ಹಾಕಿದ್ದರೆ ಫಾಮ್​ರ್ ಅನ್ನು ಮನೆಗೆ ಅಂಟಿಸಲಾಗುತ್ತದೆ, ನೆರೆ ಹೊರೆಯವರ ಸಹಾಯ ಪಡೆದು ಮನೆಯ ಮಾಲೀಕರನ್ನು ಸಂಪರ್ಕಿಸುವ ಯತ್ನ ಮಾಡಲಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಹಾಗೂ ಫಾಮ್​ರ್ಗಳನ್ನು ಸ್ವೀಕರಿಸದಿದ್ದಲ್ಲಿ ಮತದಾರರನ್ನು ಪಟ್ಟಿಯಿಂದ ಹೆಸರು ಕೈಬಿಡಲಾಗುವುದು. ಹೊಸ ಮತದಾರರು ೂಷಣೆಯೊಂದಿಗೆ ನಮೂನೆ 6 ಸಲ್ಲಿಸಬೇಕು ಎಂದು ತಿಳಿಸಿದರು. ಅರ್ಹ ಮತದಾರರನ್ನು ಕರಡು ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಆೇಪಣೆಗೆ ಆಹ್ವಾನಿಸಲಾಗುತ್ತದೆ. ಹೆಸರು ಸೇರ್ಪಡೆಗಾಗಿ ಫಾಮ್​ರ್6 ಹಾಗೂ 8 ನೀಡಲಾಗುತ್ತದೆ. ಮತದಾರರ ಪಟ್ಟಿಯಿಂದ ಹೊರಗಿಡುವಿಕೆ, ಅಳಿಸುವಿಕೆ ಆೇಪಣೆಗಳಿಗೆ ಫಾಮ್​ರ್7 ಸಲ್ಲಿಸಬೇಕಾಗುತ್ತದೆ ಎಂದು ಡಿಸಿ ತಿಳಿಸಿದರು.
ರಾಜಕೀಯ ಪಕ್ಷಗಳ ನೆರವು: ಬೂತ್​ಮಟ್ಟದಲ್ಲಿ ಏಜೆಂಟರ ನೇಮಕ ಮಾಡುವ ಮೂಲಕ ಎಸ್​ಐಆರ್​ಗೆ ರಾಜಕೀಯ ಪಗಳ ನೆರವು ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಗಳು ಬೂತ್​ನ ಏಜೆಂಟರನ್ನು ನೇಮಕ ಮಾಡಿಕೊಳ್ಳಬಹುದಾಗಿದ್ದು, ಅವರಿಗೆ ಗುರುತಿನ ಚೀಟಿ ನೀಡುತ್ತಾರೆ. ಇದರೊಂದಿಗೆ ಪ್ರತಿ ಪಂಚಾಯಿತಿ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ವಾರ್ಡ್​ವಾರು ಮತದಾರರ ನೆರವು ಕೇಂದ್ರಗಳನ್ನು ರಚಿಸಲಾಗುವುದು. ಅಲ್ಲಿ ಬೂತ್​ಮಟ್ಟದ ಎಜೆಂಟರು ಬಿಎಲ್​ಒ ಅವರೊಂದಿಗೆ ತೆರಳಿ ನೆರವು ನೀಡಬಹುದು. ಅದಕ್ಕಾಗಿ ರಾಜಕೀಯ ಪಗಳು ಏಜೆಂಟರಿಗೆ ಕಂಪ್ಯೂಟರ್​ ಹಾಗೂ ಇಂಟರ್​ನೆಟ್​ ಸಂಪರ್ಕ ಒದಗಿಸಲಾಗುವುದು ಎಂದು ಅನುರಾಧಾ ತಿಳಿಸಿದರು. ಸಮಗ್ರ ಪರಿಷ್ಕರಣೆ ಕಾರ್ಯ ಸ್ಮೂ ಪ್ರಕ್ರಿಯೆಯಾಗಿದ್ದು, ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರನ್ನು ಕೈ ಬಿಡದಂತೆ ಮುನ್ನೆಚ್ಚರಿಕಾ ಕ್ರಮವಹಿಸಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net