ಸಾರ್ಥಕ ಜೀವನ ನಡೆಸಿದ ಗಾಯಕಿ ಎಸ್.ಜಾನಕಿ

ತಿ.ನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಕಿ ಅವರಿಗೆ ತ್ರಿವೇಣಿ ಗಾಯಕರ ಕಲಾಬಳಗದಿಂದ ಗೀತ ಗಾಯನದ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಕುರುಬೂರು ಶಾಂತಕುಮಾರ್, ಎಸ್.ಎನ್. ಸಿದ್ಧಾರ್ಥ, ಕರೋಹಟ್ಟಿ ಮಹದೇವಯ್ಯ, ಡಾ.ಎಸ್.ಬಿ.ಅಭಿಲಾಷ್, ಕುಮಾರ್, ನಿಲಸೋಗೆ ಉಮೇಶ್, ಕೆ.ಎನ್.ಪ್ರಭುಸ್ವಾಮಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಕಿ ಅವರಿಗೆ ತ್ರಿವೇಣಿ ಗಾಯಕರ ಕಲಾಬಳಗದಿಂದ ಗೀತ ಗಾಯನದ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಕುರುಬೂರು ಶಾಂತಕುಮಾರ್, ಎಸ್.ಎನ್. ಸಿದ್ಧಾರ್ಥ, ಕರೋಹಟ್ಟಿ ಮಹದೇವಯ್ಯ, ಡಾ.ಎಸ್.ಬಿ.ಅಭಿಲಾಷ್, ಕುಮಾರ್, ನಿಲಸೋಗೆ ಉಮೇಶ್, ಕೆ.ಎನ್.ಪ್ರಭುಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್
  • ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ

ತಿ.ನರಸೀಪುರ:

ಹಲವಾರು ಪ್ರಶಸ್ತಿ ಪಡೆದ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರು ಹಿರಿಯ ಗಾಯಕಿಯಾಗಿ ಸಾರ್ಥಕ ಜೀವನವನ್ನು ನಡೆಸಿದರು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ತ್ರಿವೇಣಿ ಗಾಯಕರ ಕಲಾಬಳಗದಿಂದ ಆಯೋಜಿಸಿದ್ದ ಗಾನ ಸರಸ್ವತಿ ಎಸ್.ಜಾನಕಿ ಅಮ್ಮನವರ ನುಡಿ ನಮನ ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿತ ವಿದ್ಯೆಯನ್ನು ಯಾರೂ ಕಳ್ಳತನ ಮಾಡಲು ಸಾಧ್ಯವಿಲ್ಲ. ಮರಣದ ನಂತರವೂ ಶಾಶ್ವತವಾಗಿರುತ್ತದೆ ಎಂಬುದಕ್ಕೆ ಎಸ್.ಜಾನಕಿ ಅವರೇ ನಿದರ್ಶನ ಎಂದರು.
ಎಸ್.ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೇಣದಬತ್ತಿ ಉರಿಸುವ ಮೂಲಕ ನಮನ ಸಲ್ಲಿಸಲಾಯಿತು. ಮಧ್ಯಾಹ್ನದಿಂದ ರಾತ್ರಿ 8 ಗಂಟೆಯವರೆಗೂ ವಿವಿಧ ಚಲನಚಿತ್ರ ಗೀತೆಗಳು ಪ್ರಸ್ತುತಪಡಿಸುವ ಮೂಲಕ ಹಲವು ಗಾಯಕ ಗಾಯಕಿಯರು ಅಗಲಿದ ಹಿರಿಯ ಗಾಯಕಿಗೆ ಗೀತ ಗಾಯನ ಅರ್ಪಿಸಿದರು. ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಬಿ.ಅಭಿಲಾಷ್ ಮಾತನಾಡಿದರು. ನೂರಾರು ಸಂಗೀತಗಾರರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ನಿರ್ದೇಶಕ ಪೂಜಿತ್ ಮೆಡಿಕಲ್ಸ್ ಪಿ.ಕುಮಾರ್, ಕಾರ್ಯಕ್ರಮದ ಆಯೋಜಕ ನಿಲಸೋಗೆ ಉಮೇಶ್, ಕಿರಗಸೂರು ಗ್ರಾ.ಪಂ ಸದಸ್ಯ ಮಹದೇವಸ್ವಾಮಿ, ಮುಖಂಡರಾದ ಕುರುಬೂರು ಗುರುಸ್ವಾಮಿ, ಆಲಗೂಡು ಎಸ್.ಚಂದ್ರಶೇಖರ್, ಕಾರು ಮಲ್ಲಪ್ಪ, ಗೌರೀಶ್, ಕಿರಗಸೂರು ಶಂಕರ್, ನಾರಾಯಣ ಮೂರ್ತಿ, ಚಿದಾನಂದ, ತೋಟದಪ್ಪ ಬಸವರಾಜು, ಕರೋಹಟ್ಟಿ ಪ್ರಭುಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net