ಅಂಜಲಿ ಕಾನ್ವೆಂಟ್, ನೈಟಿಂಗೈಲ್ ಪ್ರೌಢಶಾಲೆಯ ರಜತ ಮಹೋತ್ಸವ

ಅಂಜಲಿ ಕಾನ್ವೆಂಟ್ ಮತ್ತು ನೈಟಿಂಗೈಲ್ ಪ್ರೌಢಶಾಲೆಯ ರಜತಮಹೋತ್ಸವ ಸಮಾರಂಭದಲ್ಲಿ ಪುಟ್ಟ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.
ಅಂಜಲಿ ಕಾನ್ವೆಂಟ್ ಮತ್ತು ನೈಟಿಂಗೈಲ್ ಪ್ರೌಢಶಾಲೆಯ ರಜತಮಹೋತ್ಸವ ಸಮಾರಂಭದಲ್ಲಿ ಪುಟ್ಟ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಅಂಜಲಿ ಕಾನ್ವೆಂಟ್, ನೈಟಿಂಗೈಲ್ ಪ್ರೌಢಶಾಲೆಯ ರಜತ ಮಹೋತ್ಸವ
  • ಡಾ.ಬಾಬು ಜಗಜೀವನ್ ರಾಮ್ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮ
  • ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಲೆಯಿಂದ ಸನ್ಮಾನ

ಬೆಂಗಳೂರು:ನಗರದ ಸುಂಕದಕಟ್ಟೆಯಶ್ರೀನಿವಾಸನಗರದಲ್ಲಿರುವ ಅಂಜಲಿಕಾನ್ವೆಂಟ್ ಮತ್ತು ನೈಟಿಂಗೈಲ್ಪ್ರೌಢಶಾಲೆಯ ರಜತಮಹೋತ್ಸವಸಮಾರಂಭವು ಸುಮನಹಳ್ಳಿಯ ಡಾ.ಬಾಬುಜಗಜೀವನ್ ರಾಮ್ ಸಂಶೋಧನಾ ಕೇಂದ್ರದಸಭಾ ಭವನದಲ್ಲಿ ಇತ್ತೀಚೆಗೆನಡೆಯಿತು.

ಕಾರ್ಯಕ್ರಮವನ್ನುವಿಶ್ವಒಕ್ಕಲಿಗರ ಮಹಾಸಂಸ್ಥಾನಮಠದ ಶ್ರೀ ಡಾ.ನಿಶ್ಚಲಾನಂದನಾಥಸ್ವಾಮೀಜಿ ಉದ್ಘಾಟಿಸಿದರು.ಆದಿಚುಂಚನಗಿರಿಮಹಾಸಂಸ್ಥಾನ ಮಠದ ವಿಜಯನಗರ ಶಾಖೆಯಶ್ರೀ ಸೌಮ್ಯನಾಥ ಸ್ವಾಮೀಜಿಬೆಳ್ಳಿಹಬ್ಬದ ಸ್ಮರಣಿಕೆಪ್ರತಿಭಾಂಜಲಿಯನ್ನು ಲೋಕಾರ್ಪಣೆಮಾಡಿದರು. ಸಂಸ್ಥೆಯಅಧ್ಯಕ್ಷರಾದ ಎಸ್.ಜಿ.ಗೌಡಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ2024-25 ನೇಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ621 ಅಂಕಗಳಿಸಿ ರಾಜ್ಯಕ್ಕೆ 5ನೇರಾಂಕ್ ಪಡೆದ ವಿದ್ಯಾರ್ಥಿ ಹಾಗೂಶೇ 80 ಕ್ಕಿಂತಹೆಚು ಅಂಕ ಪಡೆದ ವಿದ್ಯಾರ್ಥಿಗಳುಮತ್ತು 13 ನೇಬಾರಿಗೆ ಶೇ 100ಪಲಿತಾಂಶಕ್ಕೆಕಾರಣರಾದ ಶಿಕ್ಷಕರನ್ನುಸನ್ಮಾನಿಸಲಾಯಿತು.

ಈ ವೇಳೆಆಶೀರ್ವಚನ ನೀಡಿದ ಡಾ ನಿಶ್ಚಲಾನಂದನಾಥಸ್ವಾಮಿಗಳು,ಶಿಕ್ಷಣ ತಜ್ಞರಾಗಿರುವಪ್ರಾಂಶುಪಾಲರು ಮತ್ತು ಶಿಕ್ಷಕವೃಂದದವರ ಸರಳತೆ,ಕಠಿಣಶ್ರಮವಿದ್ಯಾರ್ಥಿಗಳ ಕಲಿಕೆಯ ಬಗೆಗಿನಕಾಳಜಿಯಿಂದ ಸಂಸ್ಥೆಯಲ್ಲಿ ಉತ್ತಮಲಿತಾಂಶ ಲಭ್ಯವಾಗಿದೆ.ಪೋಷಕರು ಮಕ್ಕಳಿಗೆಕೇವಲ ಅಂಕಗಳಿಗಾಗಿ ಒತ್ತಡ ಹೇರಿದರೆಸಾಲದು.ಸಂಸ್ಕಾರ,ಸಾಮಾಜಿಕಮೌಲ್ಯಗಳನ್ನು ಬೆಳೆಸುವಜವಾಬ್ದಾರಿಯನ್ನು ಕಲಿಸಬೇಕುಎಂದರು.

ಈಸಂದರ್ಭದಲ್ಲಿ ವಿಧಾನ ಪರಿಷತ್ಸದಸ್ಯ ಪುಟ್ಟಣ್ಣ,ಕಾರ್ಯದರ್ಶಿಗಳಾದಎಂ.ಎಸ್ಸರಳ, ಬಿಜೆಪಿಮುಖಂಡ ಕೃಷ್ಣಯ್ಯ,ಕಲಾವಿದರಾದಬಿ.ಆರ್.ತೋಂಟದಾರ್ಯ,ಪೋಷಕರು,ವಿದ್ಯಾರ್ಥಿಗಳುಉಪಸ್ಥಿತರಿದ್ದರು.ಶಾಲಾ ಮಕ್ಕಳುವಿವಿಧ ವೇಷಭೂಷಣಗಳೊಂದಿಗೆಸಾಂಸ್ಕೃತಿಕ ಕಾರ್ಯಕ್ರಮದ ಮೂಲಕಪ್ರೇಕ್ಷಕರನ್ನು ರಂಜಿಸಿದರು.

ರಾಜ್ಯಕ್ಕೆ 5ನೇ ರಾಂಕ್ ಪಡೆದ ವಿದ್ಯಾರ್ಥಿಗೆ ಶುಲ್ಕವನ್ನು ಹಿಂತಿರುಗಿಸಿ ಸ್ವಾತಂತ್ರ್ಯ ದಿನಾಚರಣೆಯಂದು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಲಾಗುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net