

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಆಧ್ಯಾತ್ಮಿಕಪ್ರವಚನದಲ್ಲಿ ನಾಡು ಮಾತ್ರವಲ್ಲದೆವಿಶ್ವಪ್ರಸಿದ್ಧರಾಗಿದ್ದಶ್ರೀಸಿದ್ದೇಶ್ವರ ಸ್ವಾಮಿಗಳಅಲ್ಲಮ ಪ್ರಭುಗಳ ವಚನ-ನಿರ್ವಚನಗ್ರಂಥ ಬಹಳ ಪ್ರಸಿದ್ಧವಾಗಿದ್ದು,ಅದರ ಇಂಗ್ಲಿಷ್ಅನುವಾದದ ಕೃತಿ ಇಂದು (ಶನಿವಾರ)ಲೋಕಾರ್ಪಣೆಗೊಳ್ಳಲಿದೆ.
ಬೆಳಗ್ಗೆ10.30ಕ್ಕೆಜಯನಗರದ ಶ್ರೀಶಿವರಾತ್ರೀಶ್ವರಕೇಂದ್ರದಲ್ಲಿ ಗ್ರಂಥ ಲೋಕಾರ್ಪಣೆಕಾರ್ಯಕ್ರಮ ನಡೆಯಲಿದೆ.ಸುತ್ತೂರುಶ್ರೀಶಿವರಾತ್ರಿ ದೇಶೀಕೇಂದ್ರಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು,ವಿಜಯಪುರಜ್ಞಾನಯೋಗಾಶ್ರಮದ ಶ್ರೀಬಸವಲಿಂಗಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.ಮಾಜಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿನ್ಯಾ.ದೀಕ್ಷಿತ್ಕೃಷ್ಣ ಶ್ರೀಪಾದ ಕೃತಿ ಲೋಕಾರ್ಪಣೆಮಾಡಲಿದ್ದಾರೆ.ಸಚಿವ ಎಂ.ಬಿ.ಪಾಟೀಲ್,ಸಾಹಿತಿಗಳಾದಡಾ.ಮಲ್ಲೇಪುರಂಜಿ.ವೆಂಕಟೇಶ್,ಗೊರುಚ,ಮತ್ತಿತರರುಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುತ್ತೂರುಶ್ರೀಶಿವರಾತ್ರಿ ದೇಶೀಕೇಂದ್ರಸ್ವಾಮೀಜಿ ಅವರ ಸದಾಶಯದಂತೆ ಕಳೆದ7 ವರ್ಷಗಳಿಂದನಡೆಯುತ್ತಿದ್ದ ಗ್ರಂಥ ಪ್ರಕಟಣೆಕಾರ್ಯ ಪೂರ್ಣಗೊಂಡಿದ್ದು,ಎರಡು ಸಂಪುಟಗಳಲ್ಲಿಹೊರತರಲಾಗಿದೆ.ಶ್ರೀಸಿದ್ದೇಶ್ವರಸ್ವಾಮೀಜಿ ಕೊನೆಯ ಕೃತಿ ಇದಾಗಿದೆ.