ಹಾಲುಮತದವರ ನತೆ ಹೆಚ್ಚಿಸಿದ ಸಿದ್ದರಾಮಯ್ಯ siddaramaiah

ಹಾಲುಮತದವರ ನತೆ ಹೆಚ್ಚಿಸಿದ ಸಿದ್ದರಾಮಯ್ಯ siddaramaiah
ಹಾಲುಮತದವರ ನತೆ ಹೆಚ್ಚಿಸಿದ ಸಿದ್ದರಾಮಯ್ಯ siddaramaiah
Published on
ಮುಳಬಾಗಿಲು: ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಈ ಕಾಲಘಟ್ಟದಲ್ಲಿ ಬಲು ಅಪರೂಪ. ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿ ಸೂಚನೆ ಮೇರೆಗೆ ಮರು ಮಾತನಾಡದೆ ರಾಜೀನಾಮೆ ನೀಡಿ, ಹಾಲುಮತ ಕುರುಬ ಸಮುದಾಯದ ಘನತೆ ಹೆಚ್ಚಿಸಿದ್ದಾರೆ ಎಂದು ರಾಜ್ಯ ಅಹಿಂದ ಮುಖಂಡ ಚನ್ನಾಪುರ ಎನ್​.ವೆಂಕಟೇಶಗೌಡ ಹೇಳಿದರು. siddaramaiah
ನಗರದ ಕನಕ ಸಮುದಾಯ ಭವನದಲ್ಲಿ ತಾಲೂಕು ಕುರುಬರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಒಪ್ಪಂದ ಮಾಡಿಕೊಂಡು ಮೊದಲ ಅವಧಿಗೆ ಅಧ್ಯಕ್ಷರಾದವರು ಸ್ಥಾನ ಬಿಟ್ಟುಕೊಡಲು ಹಿಂದೂ&ಮುಂದು ನೋಡುತ್ತಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದರು.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಪರಿಶ್ರಮ, ತ್ಯಾಗ, ಸಂಘಟನಾ ಚಾತುರ್ಯದಿಂದ ಮೇಲೆ ಬಂದಿದ್ದು, 2 ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆ. ಕುರುಬ ಸಮುದಾಯದ ಯತೀಂದ್ರ ಸಿದ್ದರಾಮಯ್ಯಗೆ ಡಿಸಿಎಂ, ಬೈರತಿ ಸುರೇಶ್​ ಹಾಗೂ ಮತ್ತೊಬ್ಬ ಕುರುಬ ಸಮುದಾಯದವರೆಗೆ ಮಂತ್ರಿ ಪದವಿ ಜತೆಗೆ ಯಾದವ ಸಮುದಾಯದ ಮುಖಂಡರು ಕೆಪಿಸಿಸಿ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್​ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.
ಗುಜ್ಜನಹಳ್ಳಿ ಸೋಮಣ್ಣ, ಶೆಟ್ಟಿಕಲ್ಲು ಶ್ರೀನಿವಾಸ್​, ಸಿದ್ದನಹಳ್ಳಿ ಸುರೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net