ಸಾಲು ಸಾಲು ಹಬ್ಬ ಹೊತ್ತು ತರುವ ಶ್ರಾವಣ ಮಾಸ

ವಡಗೇರಾ ತಾಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡ ೧೧೪ನೇ ಶಿವಾನುಭವ ಗೋಷ್ಠಿಯನ್ನು ಶ್ರೀ ಕರುಣೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ವೇಣುಗೋಪಾಲ ಗುರೂಜಿ, ವೇ. ಶಿವಯ್ಯ ಸ್ವಾಮಿ ಸಾತಕೇಡ, ಬನ್ನಯ್ಯ ಸ್ವಾಮಿ, ಚಂದ್ರಶೇಖರಗೌಡ ಗೋನಾಲ, ಮಲ್ಲಿಕಾರ್ಜುನ ರೆಡ್ಡಿ ಬೆನಕನಳ್ಳಿ, ವೆಂಕಟರೆಡ್ಡಿ ಗೌಡ ಶಿವನೂರ, ಮಲ್ಲಿಕಾರ್ಜುನ ಸ್ವಾಮಿ, ಸೈದಪ್ಪ ಶಿವಪುರ, ಬಸವರಾಜ ಕಾಟರಪಳ್ಳಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಂಗಮದ ಶ್ರೀ ಕರುಣೇಶ್ವರ ಶಿವಾಚಾರ್ಯರು ಅಭಿಮತ
  • ಕೃಷ್ಣವೇಣಿಯಲ್ಲಿ ೧೧೪ನೇ ಶಿವಾನುಭವಗೋಷ್ಠಿ
ವಡಗೇರಾ : 

ನಮ್ಮ ದೇಶದ ಧಾರ್ಮಿಕ ಪರಂಪರೆ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾಗಿದ್ದು, ಪ್ರತಿವರ್ಷ ಬರುವ ಶ್ರಾವಣ ಮಾಸ ಸಾಲು ಸಾಲು ಹಬ್ಬಗಳನ್ನು ಹೊತ್ತು ತರುವ ಪವಿತ್ರ ಮಾಸವಾಗಿದೆ ಎಂದು ಕೃಷ್ಣವೇಣಿ ಭೀಮಾ ಸಂಗದಮ ಶ್ರೀ ಕರುಣೇಶ್ವರ ಶಿವಾಚಾರ್ಯರು ನುಡಿದರು.

ಅಮಾವಾಸ್ಯೆ ನಿಮಿತ್ತ ಬುಧವಾರ ತಾಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರತಿ ಹಮ್ಮಿಕೊಂಡ ೧೧೪ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಆಶೀರ್ವಚನ ನೀಡಿದರು.
ಶ್ರಾವಣ ಮಾಸವು ಸುಖ, ಶಾಂತಿ, ನೆಮ್ಮದಿ, ಶ್ರದ್ಧೆ ಹಾಗೂ ಶಿಸ್ತು ಕಲಿಸುವ ಮಾಸವಾಗಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಗುರು-ಹಿರಿಯರನ್ನು ಗೌರವಿವಿಸುವ ಗುಣ ಬೆಳೆಸಿಕೊಳ್ಳಬೇಕು. ಶರಣರು ಹಾಗೂ ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೇವಲ ಶ್ರಾವಣ ಮಾಸದಲ್ಲಿ ಮಾತ್ರ ದುಶ್ಚಟಗಳಿಂದ ದೂರವಿರುವುದಲ್ಲದೆ, ಜೀವನದುದ್ದಕ್ಕೂ ದುಶ್ಚಟಗಳನ್ನು ತ್ಯಜಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಠ-ಮಾನ್ಯಗಳು ಹಾಗೂ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ಲಭಿಸಲಿದೆ ಎಂದರು.
ರಾಮಕೃಷ್ಣ ಪರಮಹಂಸರ ಆಶ್ರಮದ ಮುಖ್ಯಸ್ಥ ಶ್ರೀ ವೇಣುಗೋಪಾಲ ಗುರೂಜಿ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ವೇದಮೂರ್ತಿ ಶಿವಯ್ಯ ಸ್ವಾಮಿ ಸಾತಕೇಡ, ಬನ್ನಯ್ಯ ಸ್ವಾಮಿ, ಚಂದ್ರಶೇಖರಗೌಡ ಗೋನಾಲ, ಮಲ್ಲಿಕಾರ್ಜುನ ರೆಡ್ಡಿ ಬೆನಕನಳ್ಳಿ, ವೆಂಕಟರೆಡ್ಡಿ ಗೌಡ ಶಿವನೂರ, ಮಲ್ಲಿಕಾರ್ಜುನ ಸ್ವಾಮಿ, ಸೈದಪ್ಪ ಶಿವಪುರ, ಬಸವರಾಜ ಕಾಟರಪಳ್ಳಿ, ಸಿದ್ದಪ್ಪಗೌಡ ಶಿವಪುರ, ಹುಸೇನಪ್ಪ, ನಾಗರಾಜಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net