ಶಾಶ್ವತ ನೀರಾವರಿ ಕಲ್ಪಿಸಲು ಇಚ್ಛಾಶಕ್ತಿ ತೋರಿ Nanjavadhuta

ಶಿರಾದಲ್ಲಿ Nanjavadhuta ಜು.26ರಂದು ಆಯೋಜಿಸಿರುವ ಕೆಂಪೇಗೌಡ ಜಯಂತ್ಯುತ್ಸವಕ್ಕೆ ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಅವರನ್ನು ಆಹ್ವಾನಿಸಲಾಯಿತು.ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಚಿರತಹಳ್ಳಿ ಮಂಜುನಾಥ್​ ಇದ್ದರು.
ಶಿರಾದಲ್ಲಿ Nanjavadhuta ಜು.26ರಂದು ಆಯೋಜಿಸಿರುವ ಕೆಂಪೇಗೌಡ ಜಯಂತ್ಯುತ್ಸವಕ್ಕೆ ಪಟ್ಟನಾಯಕನಹಳ್ಳಿ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಅವರನ್ನು ಆಹ್ವಾನಿಸಲಾಯಿತು.ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಚಿರತಹಳ್ಳಿ ಮಂಜುನಾಥ್​ ಇದ್ದರು.
Published on
ಪಟ್ಟನಾಯಕನಹಳ್ಳಿ: ಶಿರಾ ತಾಲೂಕಿನ ಗೌಡಗೆರೆ, ಹುಲಿಕುಂಟೆ ಹೋಬಳಿಗಳಲ್ಲಿ Nanjavadhuta ಅಂತರ್ಜಲ ಬತ್ತಿ ಹೋಗಿದ್ದು, ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಶಾಸಕ ಟಿ.ಬಿ.ಜಯಚಂದ್ರ ಅವರು ಇಚ್ಛಾಶಕ್ತಿ ತೋರಬೇಕು ಎಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ನಗರದಲ್ಲಿ ಜು.26ರಂದು ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದ ಆಮಂತ್ರಣ ಪತ್ರಿಕೆಯನ್ನು ಮಠದಲ್ಲಿ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಅಭಿವೃದ್ಧಿಯಾಗುತ್ತಿರುವ ಶಿರಾ ಕೈಗಾರಿಕಾ ವಲಯ ಪ್ರದೇಶಗಳ ಅನುಕೂಲಕ್ಕಾಗಿ ಸರ್ಕಾರ 1 ಟಿಎಂಸಿ ನೀರು ಕೊಡಲು ಮುಂದಾಗಿರುವುದು ಸ್ವಾಗತಾರ್ಹ. ಈ ಭಾಗದ ರೈತರು ಹಾಗೂ ಜನಸಾಮಾನ್ಯರು ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದೆ. ಹಾಗಾಗಿ ಈ ಎರಡು ಹೋಬಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುಲು ಮುಂದಾಗಬೇಕು.ಕೈಗಾರಿಕೆಗಳ ಜತೆಗೆ ರೈತರ, ಜನಸಾಮಾನ್ಯರ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದರು.
ಮಳೆಅಭಾವದಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವಕಾರಣ ರೈತ ಕಂಗಾಲಾಗಿದ್ದು, ಸರ್ಕಾರ ರೈತನ ನೆರವಿಗೆ ಧಾವಿಸುವ ಅವಶ್ಯಕತೆ ಇದೆ. ಇದಲ್ಲದೆ, ಅಂತರ್ಜಲಮಟ್ಟ ಕೂಡ ಬತ್ತುತ್ತಿದೆ. ಮಧ್ಯ ಕರ್ನಾಟಕದ ಮಹತ್ವಾಕಾಂಕ್ಷೆಯ ಅಪ್ಪರ್​ ಭದ್ರಾ ನೀರಾವರಿ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುವಕೆಲಸವನ್ನು ಸರ್ಕಾರ ತಕ್ಷಣ ಮಾಡಬೇಕು. ಇಲ್ಲದಿದ್ದರೆ ರೈತ ಬರದ ಛಾಯೆಯಿಂದ ಬಳಲುವಂತಹ ಸ್ಥಿತಿ ನಿಮಾರ್ಣವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಆಸಕ್ತಿವಹಿಸಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.
26ಕ್ಕೆ ಜಯಂತಿ ಆಚರಣೆ:
ನಗರದ ಹೃದಯ ಭಾಗದಲ್ಲಿ ಅಥವಾ ಮಿನಿ ವಿಧಾನಸೌಧ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿಮಾರ್ಣ ಮಾಡುವಂತೆ ಸಲಹೆ ನೀಡಿದ ಶ್ರೀಗಳು, ಶಿರಾ ಪ್ರಮುಖ ರಸ್ತೆಗೆ ಕೆಂಪೇಗೌಡ ರಸ್ತೆ ಎಂದು ನಾಮಕರಣ ಮಾಡಬೇಕು. ಕೆಂಪೇಗೌಡರ ಆದರ್ಶ ಈ ನಾಡಿನ ಎಲ್ಲ ಯುವಕರಿಗೆ ಮಾದರಿಯಾಗಬೇಕು. ಕೆಂಪೇಗೌಡ ಜಯಂತಿ ಆಚರಣೆ ಯಶಸ್ವಿಯಾಗಿ ಸಮುದಾಯದಲ್ಲಿ ಒಗ್ಗಟ್ಟು ಮೂಡಿಸುವ ವೇದಿಕೆಯಾಗಲಿ ಎಂದರು.
ಜಯಚಂದ್ರಗೆ ಸಚಿವ ಸ್ಥಾನ ನೀಡಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ಸಚಿವ ಸಂಪುಟದಲ್ಲಿ ರಾಜಕೀಯ ಹಾಗೂ ರಾಜ್ಯದ ಅಭಿವೃದ್ಧಿಯ ಬಗ್ಗೆ ಅಪಾರ ಅನುಭವ ಇರುವ ಸಚಿವರ ಅವಶ್ಯಕತೆ ಇದ್ದು, ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರನ್ನು ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಸಂತಾಪ
ಮಾತೃ ಸ್ವರೂಪಿ, ಅನ್ನಪೂರ್ಣೆ ಎಂಬ ಪದಕ್ಕೆ ನಿಜಾರ್ಥ ನೀಡಿದ ಚೆನ್ನಮ್ಮಅವರ ನಿಧನ ಈ ನಾಡಿಗೆ ತುಂಬಲಾರದ ನಷ್ಟ ತಂದಿದೆ. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ದೇಶದ ಚುಕ್ಕಾಣಿ ಹಿಡಿಯಲು ಮಾರ್ಗದರ್ಶಿಯಾಗಿದ್ದರು. ಇಂದಿನ ಮಹಿಳೆಯರಿಗೆ ಅವರು ಬದುಕಿನ ನಡೆ ಆದರ್ಶ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಸ್ಥರಿಗೆ ಕರುಣಿಸಲಿ ಎಂದು ಪ್ರಾರ್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net