ಬೆಂಗಳೂರಿನಲ್ಲಿ ಬ್ರಾಂಡೆಡ್​ ಶೂಗಳಿಗೂ ಕೀಲಿ ಹಾಕೋ ಸಮಯ!; 1 ಲಕ್ಷಕ್ಕೂ ಹೆಚ್ಚು ಮೌಲ್ಯದ 27 ಜೊತೆ ಶೂ ಕದ್ದ ಖದೀಮರು..Shoe Thief

Bengaluru shoe thief case(Ai IMage)
Bengaluru shoe thief case(Ai IMage)
Published on

ಪ್ರಮುಖ ಮುಖ್ಯಾಂಶಗಳು

  • 27 ಜೊತೆ ಬ್ರಾಂಡೆಡ್ ಶೂಗಳ ಒಟ್ಟು ಮೌಲ್ಯ 1.3 ಲಕ್ಷ ರೂಪಾಯಿಗೂ ಅಧಿಕ.
  • ಜೂನ್ 17ರ ಮುಂಜಾನೆ 4:05 ರಿಂದ 4:20ರ ನಡುವೆ ಅಪಾರ್ಟ್‌ಮೆಂಟ್ ಒಳಗೆ ನುಗ್ಗಿ ಕೃತ್ಯ ಎಸಗಿದ ಖದೀಮ.
  • ಶೂಗಳನ್ನು ಗೋಣಿಚೀಲಕ್ಕೆ ತುಂಬಿಕೊಂಡು ಯೆಲ್ಲೋ ಬೋರ್ಡ್ ಕಾರಿನಲ್ಲಿ ಪರಾರಿಯಾದ ಕಳ್ಳರು
ಬೆಂಗಳೂರು: ನಗರದಲ್ಲಿ ಚಿನ್ನ, ಬೆಳ್ಳಿ, ನಗದು ಸೇರಿದಂತೆ ಅಮೂಲ್ಯ ವಸ್ತುಗಳು ಮಾತ್ರ ಕಳುವಾಗೋದಿಲ್ಲ. ಬದಲಾಗಿ ಇಲ್ಲಿ ನಂದಿನಿ ಹಾಲು, ತರಕಾರಿ, ಹಣ್ಣು ಎಲ್ಲವು ರಾತ್ರೋರಾತ್ರಿ ಮಾಯವಾಗುತ್ತದೆ. ಸದ್ಯ ಕಳ್ಳನೊಬ್ಬ ಬ್ರಾಂಡೆಡ್​ ಶೂವನ್ನು ಬಿಟ್ಟಿಲ್ಲ. ಹೌದು ಸಿಲಿಕಾನ್​ ಸಿಟಿಯ(Bengaluru shoe thief case)ಅಪಾರ್ಟ್​ಮೆಂಟ್​ವೊಂದರಲ್ಲಿ ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 27ಶೂ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಸದಾನಂದನಗರದ ಎನ್‌ಜಿಇಎಫ್ ಲೇಔಟ್‌ನಲ್ಲಿರುವ 'ಶ್ರೀ ಧಾಮ ಅಪಾರ್ಟ್‌ಮೆಂಟ್' ಸಂಕೀರ್ಣದಲ್ಲಿ ಕಳ್ಳನೊಬ್ಬ ಒಂದಲ್ಲ ಎರಡಲ್ಲ, ಬರೋಬ್ಬರಿ 27 ಜೊತೆ ಬ್ರಾಂಡೆಡ್ ಶೂಗಳನ್ನು ಕದ್ದು ಪರಾರಿಯಾಗಿದ್ದು, ನಿವಾಸಿಗಳು ತಬ್ಬಿಬ್ಬಾಗಿದ್ದಾರೆ. ಕಳುವಾಗಿರುವ ಈ ಶೂಗಳ ಒಟ್ಟು ಮೌಲ್ಯ 1.3 ಲಕ್ಷ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

27 ಜೊತೆ ಶೂ ಉಡೀಸ್​

50 ವರ್ಷದ ಸುಜಿತ್ ಕುಮಾರ್ ಟಿ.ಜಿ. ಎಂಬುವವರು ಮಾರ್ಕೆಟಿಂಗ್​​ ವೃತ್ತಿಪರರು. ಇವರ ಬಳಿ 23,000 ರೂಪಾಯಿ ಮೌಲ್ಯದ 7 ಜೊತೆ ಶೂ ಇತ್ತು, ಇದನ್ನು ಸಾಮಾನ್ಯವಾಗಿ ಮನೆಯ ಹೊರಗೆ ಇಡಲಾಗುತ್ತಿತ್ತು. ಯಾರು ಬರುತ್ತಿರಲಿಲ್ಲ ಎನ್ನುವುದು ನಂಬಿಕೆ ಆದರೆ, ಜೂನ್ 17 ರ ಮುಂಜಾನೆ ನೋಡಿದ್ರೆ ರ್ಯಾಕ್​ ಖಾಲಿಯಾಗಿತ್ತು ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದು ಅವರೊಬ್ಬರ ಸಮಸ್ಯೆ ಎಂದುಕೊಂಡರು ಆದರೆ, ಸತ್ಯಾಂಶ ಏನೆಂದರೆ ಅಪಾರ್ಟ್‌ಮೆಂಟ್‌ನ ಇತರ ನಿವಾಸಿಗಳನ್ನು ವಿಚಾರಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಬ್ರಾಂಡೆಡ್ ಶೂಗಳೇ ಟಾರ್ಗೆಟ್

ಒಟ್ಟಾರೆಯಾಗಿ ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಸೇರಿದ 65,000 ರೂ. ಮೌಲ್ಯದ 11 ಜೊತೆ ಶೂಗಳು, 20,000 ರೂ. ಮೌಲ್ಯದ 5 ಜೊತೆ ಶೂಗಳು ಹಾಗೂ ಮತ್ತೊಬ್ಬರಿಗೆ ಸೇರಿದ 25,000 ರೂ. ಮೌಲ್ಯದ 4 ಜೊತೆ ಶೂಗಳು ಕೂಡ ಕಳುವಾಗಿದ್ದವು. ಹೀಗೆ ಇಡೀ ಅಪಾರ್ಟ್‌ಮೆಂಟ್‌ನಿಂದ ಒಟ್ಟು 27 ಜೊತೆ ಬ್ರಾಂಡೆಡ್ ಶೂಗಳು ಕಾಣೆಯಾಗಿದ್ದವು.

ನಸುಕಿನ ಮುಂಜಾನೆಯಲ್ಲೇ ಕಳ್ಳತನ

ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳನ ಕೈಚಳಕ ಪತ್ತೆಯಾಗಿದೆ. ಜೂನ್ 17ರ ಮುಂಜಾನೆ 4:05 ರಿಂದ 4:20ರ ನಡುವೆ ಅಪಾರ್ಟ್‌ಮೆಂಟ್ ಒಳಗೆ ಓಡಾಡಿದ ದುಷ್ಕರ್ಮಿ, ಅಲ್ಲಿ ಸಿಕ್ಕ ಸಿಕ್ಕ ಬ್ರಾಂಡೆಡ್ ಶೂಗಳನ್ನು ಆರಿಸಿ ತಂದಿದ್ದ ಗೋಣಿಚೀಲಕ್ಕೆ ತುಂಬಿಸಿಕೊಂಡಿದ್ದಾನೆ. ನಂತರ ಆ ಚೀಲದೊಂದಿಗೆ ಹೊರಬಂದು ಯೆಲ್ಲೋ ಬೋರ್ಡ್ ನೋಂದಣಿ ಹೊಂದಿದ್ದ ಕಾರೊಂದರಲ್ಲಿ ಹತ್ತಿ ಪರಾರಿಯಾಗಿದ್ದಾನೆ. ಕಳ್ಳನು ಎಸ್ಕೇಪ್ ಆಗಲು ತನ್ನ ಸ್ನೇಹಿತನಾದ ಕ್ಯಾಬ್ ಚಾಲಕನ ಸಹಾಯ ಪಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net