ವರದಿಗಳ ಪ್ರಕಾರ, ಕೆಎಸ್‌ಸಿಎ ಹೆಚ್ಚುವರಿ 10,057 ಉಚಿತ ಟಿಕೆಟ್‌ಗಳಿಗಾಗಿ ಮನವಿ ಮಾಡಿದ್ದರಿಂದ ಐಪಿಎಲ್ ಫೈನಲ್ ಮತ್ತು ಪ್ಲೇಆಫ್ ಪಂದ್ಯಗಳನ್ನು ಬೆಂಗಳೂರು ಕ್ರೀಡಾಂಗಣದಿಂದ ಸ್ಥಳಾಂತರಿಸಲಾಯಿತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪಿಟಿಐಗೆ ಮಾಹಿತಿ ನೀಡಿದ್ದು, 35,000 ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಅವಕಾಶ ಕಲ್ಪಿಸಬಹುದಾದ ಕಡಿಮೆ ಸಾಮರ್ಥ್ಯವುಳ್ಳ ಸ್ಟೇಡಿಯಂನಲ್ಲಿ ಉಚಿತ ಟಿಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದ ಕಾರಣ, ಅಲ್ಲಿ ಫೈನಲ್ ಪಂದ್ಯವನ್ನು ನಡೆಸುವುದು ಉತ್ತಮ ಆಯ್ಕೆಯಲ್ಲ ಎಂದರು.