ಶವರ್ಮಾ–ಕಬಾಬ್‌ ಪ್ರಿಯರೇ ಎಚ್ಚರ! ಫುಡ್‌ ಸೇಫ್ಟಿ ರೇಡ್‌ನಲ್ಲಿ ಬಯಲಾಯ್ತು ಆತಂಕಕಾರಿ ಸತ್ಯ | Food Safety Raid

QR ಕೋಡ್‌ ಮೂಲಕ ದೂರು ನೀಡಲು ಅವಕಾಶ
QR ಕೋಡ್‌ ಮೂಲಕ ದೂರು ನೀಡಲು ಅವಕಾಶ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾದ್ಯಂತ ಹೋಟೆಲ್‌, ಡಾಬಾಗಳ ಮೇಲೆ ರೇಡ್​
  • ಶವರ್ಮಾ ಸೇಫ್‌ ಆಗಿದೆಯಾ? ರೇಡ್‌ನಲ್ಲಿ ಹೊರಬಿತ್ತು ಸತ್ಯ
  • QR ಕೋಡ್‌ ಸ್ಕ್ಯಾನ್​ ಮಾಡಿ, ಆಹಾರ-ಔಷಧದ ಬಗ್ಗೆ ದೂರು ನೀಡಿ
Karnataka Food Safety: ರಾಜ್ಯದಲ್ಲಿ ಆಹಾರ ಮತ್ತು ಔಷಧಗಳ ಗುಣಮಟ್ಟದ ವಿಚಾರದಲ್ಲಿ ಸರ್ಕಾರ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಹೋಟೆಲ್‌ಗಳು, ಡಾಬಾಗಳು, ಆಹಾರ ಮಳಿಗೆಗಳು ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಲಾಗಿದೆ. ಈ ವೇಳೆ ಸ್ವಚ್ಛತೆ ಇಲ್ಲದಿರುವುದು, ಅವಧಿ ಮೀರಿದ ಆಹಾರ, ತಪ್ಪು ಲೇಬಲಿಂಗ್‌ ಹಾಗೂ ಅಸುರಕ್ಷಿತ ಆಹಾರ ಪತ್ತೆಯಾಗಿವೆ.
ಇನ್ನು, ಆಹಾರ ಮತ್ತು ಔಷಧ ಸುರಕ್ಷತಾ ಇಲಾಖೆ ನಡೆಸಿದ ತಪಾಸಣೆಯಲ್ಲಿ ಹಲವು ಹೋಟೆಲ್‌, ಡಾಬಾ, ಗೋದಾಮುಗಳಲ್ಲಿ ನಿಯಮ ಉಲ್ಲಂಘಿನೆಯಾಗಿದೆ. ನೆಲಮಂಗಲದಿಂದ ಹಾವೇರಿವರೆಗೆ 99 ಡಾಬಾಗಳ ಮೇಲೆ ರೇಡ್​ ಮಾಡಲಾಗಿದ್ದು, 41 ಶವರ್ಮಾ ಸ್ಯಾಂಪಲ್‌ಗಳಲ್ಲಿ 9 ಹಾಗೂ 21 ಕಬಾಬ್‌ ಸ್ಯಾಂಪಲ್‌ಗಳಲ್ಲಿ ಒಂದು ಅಸುರಕ್ಷಿತ ಎನ್ನುವುದು ಲ್ಯಾಬ್‌ ಟೆಸ್ಟ್​ನಲ್ಲಿ ಪತ್ತೆಯಾಗಿದೆ.

10ರಿಂದ 15 ದಿನಗಳ ಗಡುವು

ಇನ್ನೊಂದೆಡೆ, ತಪಾಸಣೆ ವೇಳೆ ಎಕ್ಸ್​ಪೈರ್​ ಆದ ಮಟನ್‌, ಚಿಕನ್‌, ಮೀನು, ಕೊಳೆತ ತರಕಾರಿ, ಹಾಲು-ಮೊಸರು ಹಾಗೂ ಕಳಪೆ ಅಡುಗೆ ಎಣ್ಣೆ ಸೇರಿದಂತೆ ನೂರಾರು ಕೆಜಿ ಆಹಾರ ಪದಾರ್ಥವನ್ನು ಸೀಜ್​ ಮಾಡಲಾಗಿದೆ. ನಿಯಮ ಉಲ್ಲಂಘಿಸದಂತೆ ಹೋಟೆಲ್‌ಗಳು, ಡಾಬಾಗಳಿಗೆ 10ರಿಂದ 15 ದಿನಗಳ ಗಡುವು ನೀಡಿದ್ದಾರೆ. ಮುಂದಿನ ತಪಾಸಣೆಯಲ್ಲಿ ಮತ್ತೆ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಯು.ಟಿ.ಖಾದರ್‌ ಎಚ್ಚರಿಕೆ ನೀಡಿದ್ದಾರೆ.

QR ಕೋಡ್‌ ಮೂಲಕ ದೂರು ನೀಡಲು ಅವಕಾಶ

ಇನ್ನು ಆಹಾರ ಮತ್ತು ಔಷಧಗಳ ಕುರಿತ ದೂರುಗಳನ್ನು ಜನರು QR ಕೋಡ್‌ ಮೂಲಕ ದಾಖಲಿಸಿ ಟ್ರ್ಯಾಕ್‌ ಮಾಡುವ ವ್ಯವಸ್ಥೆ (Integrated Public Grievance Redressal System) ಕೂಡ ಜಾರಿಗೆ ತರಲಾಗಿ. ಅವಧಿ ಮೀರಿದ ಅಥವಾ ಹೆಚ್ಚಿನ ಬೆಲೆಗೆ ಮಾರಾಟವಾಗುವ ಔಷಧ, ಫಾರ್ಮಸಿ ಸೇವೆ, ಅಸ್ವಚ್ಛ ಆಹಾರ ಮಳಿಗೆಗಳು ಹಾಗೂ ಕೃತಕ ಬಣ್ಣ ಬಳಕೆಯಂತಹ ದೂರುಗಳನ್ನು QR ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ದಾಖಲಿಸಿ, ಅದನ್ನೂ ಟ್ರ್ಯಾಕ್‌ ಮಾಡಬಹುದಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net