ಚಿಕ್ಕನಾಯಕನಹಳ್ಳಿ: ದೇಶಕ್ಕೆ ಜವಾಹರ್ ಲಾಲ್ ನೆಹರು, ಲಾಲ್ ಬಹುದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್, ಡಾ.ಮನಮೋಹನ್ ಸಿಂಗ್ ಹೀಗೆ 6 ಜನ ಪ್ರಧಾನ ಮಂತ್ರಿಗಳನ್ನು ನೀಡಿರುವುದು ಕಾಂಗ್ರೆಸ್ ಎಂದು ಕಾಂಗ್ರೆಸ್ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಸಿ.ಡಿ ಚಂದ್ರಶೇಖರ್ ತಿಳಿಸಿದರು.
-ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ 141ನೇ ಹಾಗೂ ಸೇವಾದಳದ 103ನೇ ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡಿ, ನೆಹರು ಅವರ ಕಾಲದಲ್ಲಿ ಪಂಚವಾರ್ಷಿಕ ಯೋಜನೆಗಳು, ಕೈಗಾರಿಕಾ ಕ್ರಾಂತಿ, ಅಣೆಕಟ್ಟುಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳೊಂದಿಗೆ ಅಭಿವೃದ್ಧಿ ಮಾಡಿದರೆ ಜೈ ಜವಾನ್, ಜೈ ಕಿಸಾನ್ ಘೋಷಣೆಯ ಮೂಲಕ ರೈತರಲ್ಲಿ ಮತ್ತು ಸೈನಿಕರಲ್ಲಿ ಆತ್ಮಸ್ಥೆ$ರ್ಯವನ್ನು ತುಂಬಿದ ಕ್ಷೀರಕ್ರಾಂತಿಯ ಯೋಜನೆಗೆ ಕಾರಣರಾದವರು ಲಾಲ್ ಬಹುದ್ದೂರ್ ಶಾಸ್ತ್ರಿ ಎಂದರು.
20 ಅಂಶಗಳ ಕಾರ್ಯಕ್ರಮಗಳ ನೀಡಿ ಬಡಜನರ ಬದುಕನ್ನು ಬದಲಾಯಿಸಲು ಯೋಜನೆಯನ್ನು ಮಾಡಿದವರು, ಬಾಹ್ಯಾಕಾಶ ಸಂಸ್ಥೆಯ ಸ್ಥಾಪನೆಗೆ ಅಡಿಪಾಯ ಹಾಕಿದ್ದು ಇಂದಿರಾ ಗಾಂಧಿ ಕೊಡುಗೆ. ವೈಜ್ಞಾನಿಕ ಮತ್ತು ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಿ ಪ್ರಥಮ ಬಾರಿಗೆ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದವರು ರಾಜೀವ್ ಗಾಂಧಿ. ಆರ್ಥಿಕ ಉದಾರೀಕರಣ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಗೆ ಮದ್ದು ನೀಡಿದವರು ಪಿ.ವಿ ನರಸಿಂಹರಾವ್ ಎಂದರು.
ಅರ್ಥಸಚಿವರಾಗಿ, ಪ್ರಧಾನಿಗಳಾಗಿ ದೇಶದ ಆರ್ಥಿಕ ಸಮಸ್ಯೆಗೆ ನೂತನ ಆರ್ಥಿಕ ನೀತಿಯ ಮೂಲಕ ದೇಶವನ್ನು ಆರ್ಥಿಕವಾಗಿ ಸುಭದ್ರ ಮಾಡಿದವರು ಡಾ.ಮನಮೋಹನ್ ಸಿಂಗ್ ಹೀಗೆ ಕಾಂಗ್ರೆಸ್ ದೇಶಕ್ಕೆ ತನ್ನ ಕೊಡುಗೆಯನ್ನು ನೀಡಿದೆ ಎಂದರು.
ಪರಿಶಿಷ್ಟ ಘಟಕದ ಅಧ್ಯಕ್ಷ ಅಗಸರಹಳ್ಳಿ ನರಸಿಂಹ ಮೂರ್ತಿ, ಬೀದಿ ಬದಿ ವ್ಯಾಪಾರಿ ಘಟಕದ ಅಧ್ಯಕ್ಷ ಲಕ್ಷಿ$್ಮಪುರ ಮಂಜುನಾಥ್, ಉಪಾಧ್ಯಕ್ಷ ಮೆಬುಬ್ ಬಾಬು, ಪುರಸಭೆ ಸದಸ್ಯರಾದ ಸುಗಂಧ ರಾಜ್, ಚಂದ್ರಶೇಖರ್, ಸೇವಾದಳ ಕರಿಯಪ್ಪ, ನಾಗಣ್ಣ, ರಾಜು ಮೊಹಮ್ಮದ್ ಜಾಕಿರ್ ಇದ್ದರು.