ಶರಣಬಸವ ವಿವಿ ಒಡಂಬಡಿಕೆ

ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಎಜುಫಿನಿಕ್ಸ್​ ಸೊಲ್ಯೂಷನ್ಸ್​ ಸಂಸ್ಥೆ ಮಾಡಿಕೊಂಡಿರುವ ಒಡಂಬಡಿಕೆ ಪತ್ರವನ್ನು ಬಸವರಾಜ ದೇಶಮುಖ, ಗರ್ವಿತ್​ ಗರ್ಗ್​ ಶುಕ್ರವಾರ ವಿನಿಮಯ ಮಾಡಿಕೊಂಡರು. ಪ್ರೊ.ಅನಿಲಕುಮಾರ ಬಿಡವೆ, ಡಾ.ಲಕ್ಷ್ಮೀ ಪಾಟೀಲ್​ ಮಾಕಾ ಇತರರಿದ್ದರು.
ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಎಜುಫಿನಿಕ್ಸ್​ ಸೊಲ್ಯೂಷನ್ಸ್​ ಸಂಸ್ಥೆ ಮಾಡಿಕೊಂಡಿರುವ ಒಡಂಬಡಿಕೆ ಪತ್ರವನ್ನು ಬಸವರಾಜ ದೇಶಮುಖ, ಗರ್ವಿತ್​ ಗರ್ಗ್​ ಶುಕ್ರವಾರ ವಿನಿಮಯ ಮಾಡಿಕೊಂಡರು. ಪ್ರೊ.ಅನಿಲಕುಮಾರ ಬಿಡವೆ, ಡಾ.ಲಕ್ಷ್ಮೀ ಪಾಟೀಲ್​ ಮಾಕಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಬಿಎ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್​
  • ಪ್ರಾಯೋಗಿಕ ತರಬೇತಿ ಅವಕಾಶ
  • ಎಜುಫಿನಿಕ್ಸ್​ ಸೊಲ್ಯೂಷನ್ಸ್​ ಜತೆ
ಕಲಬುರಗಿ:  ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯದಡಿ ಕಾರ್ಯನಿರ್ವಹಿಸುತ್ತಿರುವ ಬಿಬಿಎ ವಿಭಾಗವು ಬೆಂಗಳೂರಿನ ಎಜುಫಿನಿಕ್ಸ್​ ಸೊಲ್ಯೂಷನ್ಸ್​ ಸಂಸ್ಥೆಯೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ಬಿಬಿಎ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್​, ಪ್ರಾಯೋಗಿಕ ತರಬೇತಿ ಹಾಗೂ ಸಂಸ್ಥೆ ಮತ್ತು ವ್ಯವಹಾರ ಕ್ಷೇತ್ರದ ನೈಜ ಕಾರ್ಯವೈಖರಿ ಪರಿಚಯಿಸುವುದು ಒಡಂಬಡಿಕೆಯ ಪ್ರಮುಖ ಉದ್ದೇಶ.
ವಿವಿ ಉಪಕುಲಪತಿ ಕಚೇರಿಯಲ್ಲಿ ಶುಕ್ರವಾರ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ಎಜುಫಿನಿಕ್ಸ್​ ಸೊಲ್ಯೂಷನ್ಸ್​ ನಿರ್ದೇಶಕ ಗರ್ವಿತ್​ ಗರ್ಗ್​ ಸಹಿ ಮಾಡಿದ ಒಡಂಬಡಿಕೆ ಪ್ರತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಇದಕ್ಕೂ ಮುನ್ನ ವಿವಿ ಪರವಾಗಿ ಕುಲಸಚಿವೆ ಡಾ.ಲಕ್ಷ್ಮೀ  ಪಾಟೀಲ್​ ಮಾಕಾ ಹಾಗೂ ಗರ್ವಿತ್​ ಒಡಂಬಡಿಕೆಗೆ ಸಹಿ ಹಾಕಿದರು. ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್​.ಎಚ್​. ಹೊನ್ನಳ್ಳಿ, ಬಿಬಿಎ ವಿಭಾಗದ ಡಾ.ಶಶಿಕಾಂತ ಎಸ್​.ಕೆ. ಇತರರಿದ್ದರು.
ಬಸವರಾಜ ದೇಶಮುಖ ಮಾತನಾಡಿ, ಈ ಒಡಂಬಡಿಕೆ ಮೂಲಕ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್​ ಅವಕಾಶ ಕಲ್ಪಿಸುವುದರ ಜತೆಗೆ ಕೈಗಾರಿಕಾ ಭೇಟಿ, ಅತಿಥಿ ಉಪನ್ಯಾಸ, ಕಾರ್ಯಾಗಾರ, ಜ್ಞಾನ ಮತ್ತು ಕೌಶಲಾಭಿವೃದ್ಧಿಗೆ ಪೂರಕ ವಿವಿಧ ಚಟುವಟಿಕೆ ಹಮ್ಮಿಕೊಳ್ಳಲು, ಉದ್ಯಮ ಸಹಭಾಗಿತ್ವ, ಪರಸ್ಪರ ಸಹಕಾರದ ಚೌಕಟ್ಟು ರೂಪಿಸುವ ಮೂಲಕ ಅನುಭವ ಆಧಾರಿತ ಕಲಿಕೆ, ಜ್ಞಾನ ಹಂಚಿಕೆ ಹಾಗೂ ಉತ್ತಮ ವೃತ್ತಿ ಅವಕಾಶಗಳಿಗೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು.
ಸಂಸ್ಥೆಯು ಅರ್ಹ ಬಿಬಿಎ ವಿದ್ಯಾರ್ಥಿಗಳಿಗೆ ಇಂಟರ್ನ್​ಶಿಪ್​ ಅವಕಾಶ ಒದಗಿಸಿ ವ್ಯವಹಾರ ಆಡಳಿತ, ಸಂಸ್ಥೆ ಕಾರ್ಯವೈಖರಿ ಹಾಗೂ ನಿರ್ವಹಣಾ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ನೆರವಾಗಲಿದೆ. ವ್ಯವಹಾರ ಆಡಳಿತ, ಮಾನವ ಸಂಪನ್ಮೂಲ ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಹಣಕಾಸು ಕಾರ್ಯಾಚರಣೆ, ಸಾಮಾನ್ಯ ಆಡಳಿತ ಸೇರಿ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ನೇರ ತರಬೇತಿ ಮತ್ತು ಅನುಭವ ಸಿಗಲಿದೆ.
"

ಬಿಬಿಎ ವಿದ್ಯಾರ್ಥಿಗಳ ಕೌಶಲ ಮತ್ತಷ್ಟು ಅಭಿವೃದ್ಧಿಪಡಿಸಲು ಹಾಗೂ ಇಂಟರ್ನ್​ಶಿಪ್​ ಅವಧಿಯಲ್ಲಿ ಉದ್ಯಮ ಕ್ಷೇತ್ರದಲ್ಲಿ ನೇರವಾಗಿ ಕಾರ್ಯನಿರ್ವಹಿಸಿ ಪ್ರಾಯೋಗಿಕ ಅನುಭವ ಪಡೆಯಲು ಹೆಚ್ಚಿನ ಅವಕಾಶ ದೊರೆಯಲಿದೆ.

— > ಬಸವರಾಜ ದೇಶಮುಖ ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net