ಆರ್‌ಎಸ್‌ಎಸ್ ಕೇವಲ ವ್ಯಕ್ತಿ ನಿರ್ಮಾಣ ಮಾಡುವ ಶಿಸ್ತಿನ ಕೇಂದ್ರವಾಗಿದ್ದು, ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳು ಅಲ್ಲಿ ನಡೆಯುವುದಿಲ್ಲ ಎಂದು ಅವರು ಹೇಳಿದರು. ಸಂಘದ ಚಟುವಟಿಕೆಗಳೆಲ್ಲವೂ ತೆರೆದ ಮೈದಾನಗಳಲ್ಲಿ ಸಾರ್ವಜನಿಕರ ಕಣ್ಣೆದುರೇ ನಡೆಯುತ್ತವೆ. ಆದ್ದರಿಂದ ಅನಗತ್ಯ ಆರೋಪಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.