

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಮುಂದಿನ ವರ್ಷಶಂಕರ ಜಯಂತಿಗೆ ಮುನ್ನ ಮಹಾಲಕ್ಷ್ಮಿಲೇಔಟ್‌ನಲ್ಲಿ ಆದಿ ಶಂಕರಾಚಾರ್ಯರಬೃಹತ್ ಪ್ರತಿಮೆ ನಿರ್ಮಾಣಮಾಡುವುದಾಗಿ ಶಾಸಕ ಕೆ.ಗೋಪಾಲಯ್ಯ ಭರವಸೆನೀಡಿದ್ದಾರೆ.
ಶಂಕರಜಯಂತಿ ಅಂಗವಾಗಿ ಮಹಾಲಕ್ಷ್ಮಿಪುರಂಬ್ರಾಹ್ಮಣ ಮಹಾಸಭಾ ಮಂಗಳವಾರಮಹಾಲಕ್ಷ್ಮಿ ಲೇಔಟ್‌ನಲ್ಲಿಏರ್ಪಡಿಸಿದ್ದ ತತ್ವಜ್ಞಾನಿಗಳದಿನಾಚರಣೆಯಲ್ಲಿ ಮಾತನಾಡಿದರು.
ಪ್ರತಿಮೆನಿರ್ಮಾಣಕ್ಕಾಗಿ ಜಾಗ ಗುರುತಿಸುವಪ್ರಕ್ರಿಯೆ ನಡೆದಿದ್ದು,ಶೀಘ್ರವೇಅಂತಿಮಗೊಳಿಸಲಾಗುವುದು.ದೇವಾಲಯಗಳಕ್ಷೇತ್ರ ಎಂದೇ ಹೆಸರಾದ ಮಹಾಲಕ್ಷ್ಮಿಲೇಔಟ್ ಬೆಂಗಳೂರು ನಗರದ ಪ್ರವಾಸಿಕೇಂದ್ರವಾಗಿಯೂ ಅಭಿವೃದ್ಧಿಹೊಂದುತ್ತಿದ್ದು,ಮುಂದಿನ ವರ್ಷ ಶಂಕರಾಚಾರ್ಯರ ಬೃಹತ್ ಪ್ರತಿಮೆಅನಾವರಣದೊಂದಿಗೆ ಶಂಕರ ಜಯಂತಿಯನ್ನುಆಚರಿಸಲಾಗುವುದು.ಭಾರತದ ನಾಲ್ಕೂದಿಕ್ಕುಗಳಲ್ಲಿ ಚತುರಾಮ್ನಾಯಪೀಠಗಳನ್ನು ಸ್ಥಾಪಿಸಿ,ಇಡೀ ಜಗತ್ತಿಗೆಅದ್ವೈತ ತತ್ವವನ್ನು ಸಾರಿದ ಶಂಕರರುಲೋಕಕ್ಕೆ ದೊಡ್ಡ ಆಧ್ಯಾತ್ಮಿಕಸಂಪತ್ತನ್ನು ನೀಡಿದ್ದಾರೆ.ಅವರ ಜನ್ಮದಿನವನ್ನುತತ್ವಜ್ಞಾನಿಗಳ ದಿನವಾಗಿಆಚರಿಸುತ್ತಿರುವುದು ಹೆಚ್ಚುಅರ್ಥಪೂರ್ಣವಾಗಿದೆ ಎಂದು ಶಾಸಕರುಹೇಳಿದರು.
ಕಾರ್ಯಕ್ರಮದಲ್ಲಿಹಿರಿಯ ವೇದ ವಿದ್ವಾಂಸರಿಗೆ ಶಂಕರಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ನ್ಯಾ.ಶ್ರೀಶಾನಂದ,ಬ್ರಾಹ್ಮಣಮಹಾಸಭಾದ ಅಧ್ಯಕ್ಷ ಡಾ.ಬಿ.ಎಸ್.ರಾಘವೇಂದ್ರಭಟ್, ಹೆಚ್ಚುವರಿಅಡ್ವೊಕೇಟ್ ಜನರಲ್ ಮಲ್ಹಾರಿರಾವ್ಮತ್ತಿತರರು ಉಪಸ್ಥಿತರಿದ್ದರು.
ಅದ್ವೈತ ತತ್ವವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯರು ಹೊಸ ಲೋಕಜ್ಞಾನದ ಬೆಳಕನ್ನು ನೀಡಿದ್ದಾರೆ. ಶಂಕರರೂ ಸೇರಿದಂತೆ ಆಧುನಿಕ ಕಾಲದ ಕವಿಗಳ ವರೆಗೆ ಎಲ್ಲರೂ ಶಾಂತಿ, ಸಹಬಾಳ್ವೆಯ ಸಂದೇಶವನ್ನೇ ಸಾರಿದ್ದಾರೆ.