ವಿಜಯಪುರದಲ್ಲಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. ಬ್ರಾಹ್ಮಣ ಸೇವಾ ಟ್ರಸ್ಟ್ನ ಮಾಜಿ ಅಧ್ಯಕ ಶೇಷಗಿರಿ ರಾವ್, ಪ್ರಮುಖರಾದ ಡಿ.ಎಸ್. ರವಿಕುಮಾರ್, ಜಗದೀಶ್, ವಿಕಾಸ್, ರುನಾಥ್ ಎಸ್., ರಾಮಕೃಷ್ಣ ಹೆಗಡೆ, ಚಂದ್ರಶೇಖರ್, ಚೇತನ್, ವಿಜಯಕುಮಾರ್ ಉಪಸ್ಥಿತರಿದ್ದರು. ಅಲ್ಲದೆ, ನಿವೃತ್ತ ಶಿಕ್ಷಕರಾದ ಅಶೋಕ್ ಕುಮಾರ್, ಗುರು ಶರ್ಮ, ನಾಗೇಂದ್ರ ಪ್ರಸಾದ್, ಎಸ್.ಎ. ನಾಗೇಶ್, ಚಂದ್ರು, ರತ್, ಬಾಲಾಜಿ ರಾವ್ ಇದ್ದರು.
Published on:
Copied
Follow Us
ವಿಜಯಪುರ : ಪಟ್ಟಣದ ಬ್ರಾಹ್ಮಣ ಸೇವಾ ಟ್ರಸ್ಟ್ ಹಾಗೂ ವಾಗ್ದೇವಿ ವಿಪ್ರ ಮಹಿಳಾ ಸಂದ ಸಂಯುಕ್ತಾಶ್ರಯದಲ್ಲಿ ಆದಿ ಗುರು ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.
ಶಂಕರಾಚಾರ್ಯರ ಭಾವಚಿತ್ರವನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಂಗಳವಾದ್ಯಗಳ ೂಷದೊಂದಿಗೆ ಸಾಗಿದ ಭವ್ಯ ಮೆರವಣಿಗೆಯು ಪಟ್ಟಣದಾದ್ಯಂತ ಭಕ್ತಿ ಸಂಚಲನ ಮೂಡಿಸಿತು.
ಬ್ರಾಹ್ಮಣ ಸೇವಾ ಟ್ರಸ್ಟ್ನ ಮಾಜಿ ಅಧ್ಯಕ ಶೇಷಗಿರಿ ರಾವ್ ಮಾತನಾಡಿ, ಶಂಕರಾಚಾರ್ಯರು ಕೇವಲ ಧರ್ಮ ಪ್ರಚಾರಕರಲ್ಲ, ಅವರು ಭಾರತದ ಸಾಂಸತಿಕ ಏಕತೆಯ ಹರಿಕಾರರು. ಅಲ್ಪಾಯುಷ್ಯದಲ್ಲೇ ಅವರು ದೇಶದಾದ್ಯಂತ ಸಂಚರಿಸಿ ಅದ್ವೈತ ಸಿದ್ಧಾಂತವನ್ನು ಪಸರಿಸಿದ ರೀತಿ ಅದ್ವೀತಿಯ. ಅವರು ಸ್ಥಾಪಿಸಿದ ಪೀಠಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಅವರ ಜ್ಞಾನ ಮತ್ತು ಶಿಸ್ತು ನಮ್ಮ ಜೀವನಕ್ಕೆ ಆದರ್ಶವಾಗಲಿ ಎಂದರು.
ವಾಗ್ದೇವಿ ವಿಕ್ರಮ ಮಹಿಳಾ ಸಂದಿಂದ ವಿ.ಗಾಯತ್ರಿ, ಕೆ. ಸುಮಾ, ಎಸ್. ನಳಿನಾ, ಸುಜಾತಾ, ವಾಣಿ, ಸರ್ವಮಂಗಳ ಮತ್ತು ಸುಮಿತ್ರಾ ಉಪಸ್ಥಿತರಿದ್ದರು.