ಚಳಚರಂಡಿ ಕಾಮಗಾರಿಗೆ ಶೀಘ್ರ ಆರಂಭ

ಯಾದಗಿರಿಯ ವನಕೇರಿ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ಶೌಚಗೃಹ ಕಟ್ಟಡದ ಕಾಮಗಾರಿಗೆ ಶನಿವಾರ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಅಡಿಗಲ್ಲು ನೆರವೇರಿಸಿದರು. ಸುರೇಶ ಅಂಕಲಗಿ, ಉಮೇಶ ಚವ್ಹಾಣ್​, ಚನ್ನಕೇಶಗೌಡ ಬಾಣತಿಹಾಳ, ತಿಮ್ಮಣ್ಣ ನಾಯಕ, ಸಾಯಿಬಣ್ಣ ಕೆಂಗೂರಿ, ಶರಣಗೌಡ ಬಲಕಲ್​, ಸುರೇಶ ಮಡ್ಡಿ, ಸಾಯಿಬಣ್ಣ ಬಾಡಿಯಾಳ ಇತರರಿದ್ದರು.
ಯಾದಗಿರಿಯ ವನಕೇರಿ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ಶೌಚಗೃಹ ಕಟ್ಟಡದ ಕಾಮಗಾರಿಗೆ ಶನಿವಾರ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಅಡಿಗಲ್ಲು ನೆರವೇರಿಸಿದರು. ಸುರೇಶ ಅಂಕಲಗಿ, ಉಮೇಶ ಚವ್ಹಾಣ್​, ಚನ್ನಕೇಶಗೌಡ ಬಾಣತಿಹಾಳ, ತಿಮ್ಮಣ್ಣ ನಾಯಕ, ಸಾಯಿಬಣ್ಣ ಕೆಂಗೂರಿ, ಶರಣಗೌಡ ಬಲಕಲ್​, ಸುರೇಶ ಮಡ್ಡಿ, ಸಾಯಿಬಣ್ಣ ಬಾಡಿಯಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ಭರವಸೆ
  • ಸಾರ್ವಜನಿಕ ಶೌಚಗೃಹ ಉದ್ಘಾಟನೆ
ಯಾದಗಿರಿ: ಜಿಲ್ಲಾ ಕೇಂದ್ರ ಸ್ಥಾನದ ನಗರದಲ್ಲಿ ಒಳಚರಂಡಿ ಕಾಮಗಾರಿಗಾಗಿ ರಾಜ್ಯ ಸರ್ಕಾರ ಮಂಜೂರು ಮಾಡಿರುವ 278 ಕೋಟಿ ರೂ. ಅನುದಾನದಲ್ಲಿ ಇಷ್ಟರಲ್ಲಿಯೇ ಟೆಂಡರ್​ ಪ್ರಕ್ರಿಯೆ ಮುಗಿದು ಕೆಲಸ ಆರಂಭಿಸಲಾಗುವುದು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ಇಲ್ಲಿನ 26ನೇ ವಾರ್ಡ್​ನಲ್ಲಿ ನಗರಸಭೆಯ 12 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಗೃಹ ಉದ್ಘಾಟನೆ ಮತ್ತು ವನಕೇರಿ ಬಡಾವಣೆಯಲ್ಲಿ 12 ಲ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ಶೌಚಗೃಹ ಕಟ್ಟಡಕ್ಕೆ ಶನಿವಾರ ಅಡಿಗಲ್ಲು ಹಾಕಿ ಅವರು ಮಾತನಾಡಿದರು.
ನಗರದಲ್ಲಿ ಇದುವರೆಗೂ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇರಲಿಲ್ಲ. ಇದನ್ನು ಮನಗಂಡ ತಾವು ಸಿಎಂ ಅವರಿಗೆ ಮನವಿ ಸಲ್ಲಿಸಿ ಇದನ್ನು ಮಂಜೂರು ಮಾಡಿಸಿದ್ದು, ಕೂಡಲೇ ಕೆಲಸ ಆರಂಭಿಸಲಾಗುವುದು ಎಂದರು.
ಈಗಾಗಲೇ ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆ ವಿಭಜಕ, ತಡೆ ಗೋಡೆ ಮತ್ತು ಅನೇಕ ಉತ್ತಮ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ನಗರದ ಎಲ್ಲೆಡೆ ವಿದ್ಯುತ್​ಎಲ್​ಇಡಿ ದೀಪ ಹಾಕಲಾಗಿದೆ ಎಂದರು.
ಜಿಲ್ಲೆಯ ಹೆಚ್ಚಿನ ಜನರಿಗೆ ಅನುಕೂಲವಾಗಲು ಯಿಮ್ಸ್​ನಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶ್ರೀ ಚಾಲನೆ ನೀಡಲಾಗುವುದು. ನಗರದ ಹತ್ತಿಕುಣಿ ಕ್ರಾಸ್​ನಿಂದ ಚಾಮನಳ್ಳಿ ಕ್ರಾಸ್​ವರೆಗೆ 5 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್​ ಕರೆಯಲಾಗಿದೆ. ಅದರ ಕಾಮಗಾರಿಯೂ ಆದಷ್ಟು ಬೇಗ ಆರಂಭಿಸಲಾಗುವುದು. ನಗರಕ್ಕೆ ಭೀಮಾನದಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ಹೆಚ್ಚಿನ ಅನುದಾನ ಅವಶ್ಯಕತೆ ಇದೆ. ಇದಕ್ಕಾಗಿ ಸಿಎಂ ಅವರನ್ನು ಭೇಟಿ ಅನುದಾನ ಬಿಡುಗಡೆ ಮಾಡಿ ಕೆಲಸ ಮಾಡಿಸಲಾಗುವುದು ಎಂದು ಹೇಳಿದರು.
ಕೃಷಿ ಮಾರುಕಟ್ಟೆ ಒಳಗಡೆ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲು ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್​ ಕರೆಯಲಾಗಿದ್ದು, ಒಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಸದಾ ಬದ್ಧನಾಗಿದ್ದೇನೆ ಎಂದರು.
ಈ ವೇಳೆ ತಹಸೀಲ್ದಾರ್​ ಸುರೇಶ ಅಂಕಲಗಿ, ನಗರಸಭೆ ಆಯುಕ್ತ ಉಮೇಶ ಚವ್ಹಾಣ್​, ನಗರಸಭೆ ಸದಸ್ಯ ಚನ್ನಕೇಶಗೌಡ ಬಾಣತಿಹಾಳ, ತಿಮ್ಮಣ್ಣ ನಾಯಕ, ಸಾಯಿಬಣ್ಣ ಕೆಂಗೂರಿ, ಶರಣಗೌಡ ಬಲಕಲ್​, ಸುರೇಶ ಮಡ್ಡಿ, ಸಾಯಿಬಣ್ಣ ಬಾಡಿಯಾಳ, ಮೃತ್ಯುಂಜಯ, ಗುತ್ತೆದಾರ ಅಶೋಕ, ನಗರಸಭೆ ಅಧಿಕಾರಿಗಳಾದ ಶರಣಮ್ಮ, ನಾಗರಾಜ ಇತರರಿದ್ದರು.

ನಗರದ ಪರಿಸರ ಸ್ವಚ್ಛತೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಗಮನ ಹರಿಸಬೇಕು. ಈ ಬಗ್ಗೆ ವ್ಯಾಪಕ ದೂರು ಬರುತ್ತಿವೆ. ಸಾರ್ವಜನಿಕ ಶೌಚಗೃಹ ನಿರ್ವಹಣೆ ಮಾಡುವ ಸಿಬ್ಬಂದಿ ನಿತ್ಯ ಸ್ವಚ್ಛತೆಗೆ ಗಮನ ನೀಡಿದಾಗ ಮಾತ್ರ ಜನತೆಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net