ಕ್ರೈಸ್ ನೇಮಕಾತಿಗೆ ಸರ್ವರ್ ಕಾಟ!

ಸರ್ವರ್ ಸಮಸ್ಯೆ ತೋರಿಸುತ್ತಿರುವ ಸೈಟ್ ಪೇಜ್
ಸರ್ವರ್ ಸಮಸ್ಯೆ ತೋರಿಸುತ್ತಿರುವ ಸೈಟ್ ಪೇಜ್
Published on

ಪ್ರಮುಖ ಮುಖ್ಯಾಂಶಗಳು

  • ದಿನವಿಡೀ ತಾಂತ್ರಿಕ ದೋಷ
  • ಅರ್ಜಿ ಸಲ್ಲಿಕೆಗೆ ಗ್ರಾಮೀಣ ಅಭ್ಯರ್ಥಿಗಳ ಪರದಾಟ
ಸಿಂದಗಿ:

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕೆಆರ್‌ಐಇಎಸ್/KREIS) ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕಳೆದೊಂದು ವಾರದಿಂದಲೂ ಸರ್ವರ್ ಸಮಸ್ಯೆ ತೀವ್ರಗೊಂಡಿದ್ದು, ಅಭ್ಯರ್ಥಿಗಳು ದಿನವಿಡೀ ಸೈಬರ್ ಕೇಂದ್ರಗಳ ಮುಂದೆ ರಾತ್ರಿವರೆಗೂ ಕಾಯುತ್ತಿದ್ದರೂ ತಾಂತ್ರಿಕ ದೋಷದಿಂದ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪರದಾಡಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ಮನೆಗೆ ಮರಳುವಂತಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು cetonline.karnataka.gov.in/kea ಭೇಟಿ ನೀಡಿದಾಗ ಡಿಜಿಲಾಕರ್ ಮೂಲಕ ಹೊಸ ಅಭ್ಯರ್ಥಿಯಾಗಿ ನೋಂದಣಿ ಮಾಡಿಕೊಳ್ಳಬೇಕು. ಆಗಲೂ ಅಭ್ಯರ್ಥಿಯಾಗಿ ಹೇಗೆ ದಾಖಲಿಸಿಕೊಳ್ಳಬೇಕೆಂಬ ಗೊಂದಲ ಮೂಡುತ್ತಿದ್ದು, ಲಾಗಿನ್ ನಂತರದಲ್ಲಿಯೂ ಒಟಿಪಿ ಪಡೆಯುವುದು ಸಾಧ್ಯವಾದರೂ ಏಕಾಏಕಿ ಮಾಯವಾಗುವ ಲಿಂಕ್‌ನಲ್ಲಿ ಪಡೆದ ಒಟಿಪಿಯನ್ನು ದಾಖಲಿಸಲಾಗದೇ ಸಮಸ್ಯೆ ತಿಳಿಯದೇ ಆಭ್ಯರ್ಥಿಗಳು ಸಂಕಟ ಪಡುವಂತಾಗಿದೆ.
ಒಂದೇ ಸಮಯದಲ್ಲಿ ಸಾವಿರಾರು ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದರಿಂದ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಾಲತಾಣದ ಮುಖಪುಟ ಲಾಗಿನ್ ಮಾಡಲು ಹರಸಾಹಸ ಪಡುವಂತಾಗಿದೆ.
ಸರ್ಕಾರಿ ಹುದ್ದೆಗಾಗಿ ಹಂಬಲಿಸುತ್ತಿರುವ ವಯೋಮಿತಿ ಹೊಂದಿರುವ ಹಾಗೂ ವಯೋ ಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ತೀವ್ರ ತೊಂದರೆ ಯಾಗುತ್ತಿದೆ. ಅವರಲ್ಲೂ ಗ್ರಾಮೀಣ ಭಾಗಗಳ ಅಭ್ಯರ್ಥಿಗಳೇ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವಾರು ಗ್ರಾಮಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಸಮರ್ಪಕವಾಗಿಲ್ಲದ ಕಾರಣ ಅವರು ತಾಲೂಕು ಸೈಬರ್ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ಪ್ರಯಾಣ ವೆಚ್ಚ, ಸಮಯ ಹಾಗೂ ದಿನಗೂಲಿ ಕಳೆದುಕೊಂಡರೂ ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ನಗರದ ಬಹುತೇಕ ಕಂಪ್ಯೂಟರ್ ಕೇಂದ್ರಗಳು, ಸೈಬರ್ ಕೆೆಗಳು, ನಸುಕಿನ ವೇಳೆಯಿಂದ, ತಡರಾತ್ರಿವರೆಗೂ ಸರ್ವರ್ ಕಾಯುವುದೇ ಕೆಲಸವಾಗಿದೆ. ಕೆಲವೊಮ್ಮೆ ತಾಂತ್ರಿಕ ಸಮಸ್ಯೆ ಬಂದರೆ ಸಾವರಿಸಿಕೊಳ್ಳಬಹುದು, ಆದರೆ ಸದಾ ಸಮಸ್ಯೆಯಿಂದಲೇ ಬಳಲುತ್ತಿರುವ ಕ್ರ್ತ್ರೈಸ್ ಜಾಲತಾಣ ದಲ್ಲಿ ದಿನವೊಂದಕ್ಕೆ ಹತ್ತು ಅಭ್ಯರ್ಥಿಗಳ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
ಅಭ್ಯರ್ಥಿಯ ಎಲ್ಲ ಪ್ರಯತ್ನಗಳ ನಂತರ ಇಲಾಖೆಯ ಕೇಂದ್ರ ಕಚೇರಿಯ ದೂರವಾಣಿಗೆ ಸಂಪರ್ಕಿಸಿದರೆ ಕಚೇರಿಯಿಂದ ಸ್ಪಂದನೆ ಸಿಗುತ್ತಿಲ್ಲ. ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದು, ಈ ಸಮಸ್ಯೆಗೆ ಯಾರಿಂದ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಯದೇ ತೀವ್ರ ಆಕಾಂಕ್ಷಿಗಳು ಆತಂಕದಲ್ಲಿದ್ದಾರೆ. ಆ.13 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಸರ್ಕಾರ ಹಾಗೂ ಇಲಾಖೆ ಕೊನೆಯ ದಿನಾಂಕವನ್ನು ವಿಸ್ತರಿಸಿ, ಅರ್ಜಿ ಸಲ್ಲಿಸಲು ಹೆಚ್ಚಿನ ಅವಕಾಶ ಕಲ್ಪಿಸಬೇಕೆಂದು ಅರ್ಹ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
"

ಬಹುತೇಕ ದಿನಗಳಿಂದ ಕ್ರ್ತ್ರೈಸ್ ಮೂಲಕ ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ ಹಾಕಲು ವೆಬ್‌ಸೈಟ್ ಲಿಂಕ್ ಸ್ಪಂದಿಸುತ್ತಿಲ್ಲ. ಸೈಟ್ ರ್ರಿೆಶ್ ಮಾಡುತ್ತಲೇ ಎರಡು ವಾರ ಕಳೆದಿದೆ. ಇನ್ನೊಂದು ವಾರದೊಳಗೆ ಅರ್ಜಿ ಸಲ್ಲಿಸಬೇಕು. ನೆಟ್ ಸೆಂಟರ್‌ಗಳಲ್ಲಿ ಸರದಿಯೋ ಸರದಿ. ಗ್ರಾಮೀಣ ಪ್ರದೇಶದಲ್ಲಿ ಗಟ್ಟಿ ಅಂತರ್ಜಾಲದ ವ್ಯವಸ್ಥೆ ಸಿಗದ ಕಾರಣ ಅರ್ಜಿ ಸಲ್ಲಿಸುವ ಅವಕಾಶದಿಂದ ನಾವು ವಂಚಿತವಾಗುತ್ತಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net