

ಪ್ರಮುಖ ಮುಖ್ಯಾಂಶಗಳು
ಉತ್ತಮ ಶಿಕ್ಷಣ ಪಡೆದು ದೇಶ ಸೇವೆಗೆ ಮುಂದಾಗಿ
| ಬಸವಪ್ರಸಾದ್ ಜೊಲ್ಲೆ ಕರೆ | ಎಸ್‌ಎಸ್‌ಎಲ್‌ಸಿ ಪರಿಣಾಮವಾಗಿ ಬೀಳ್ಕೊಡುಗೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೇಶ ಸೇವೆ ಹಾಗೂ ಸಮಾಜ ಸೇವೆಯಲ್ಲಿ ತಾವೂ ತೊಡಗಿಸಿಕೊಂಡು, ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕು ಎಂದು ಜೊಲ್ಲೆ ಗ್ರೂಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಕರೆ ನೀಡಿದರು.
ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿನ ಜೊಲ್ಲೆ ಎಜ್ಯುಕೇಶನ್ ಸೊಸಾಯಟಿಯ ಅಂಗ ಸಂಸ್ಥೆಯಾದ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಹಂತವು ಜೀವನದಲ್ಲಿ ಪ್ರಮುಖ ಹಂತವಾಗಿದೆ, ಧೈರ್ಯದಿಂದ ಯಾವುದೇ ಆತಂಕವಿಲ್ಲದೇ ಪರೀಕ್ಷೆ ಎದುರಿಸಬೇಕು. ನಿರಂತರ ಓದು ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ಮಾಡುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಪ್ರೇರಣೆಗಾಗಿ ಜೊಲ್ಲೆ ಎಜ್ಯುಕೇಶನ್ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಎಂದು ಸಂಸ್ಥೆಯ ಕೊಡುಗೆ ಹಾಗೆಯೇ ಬೆಳೆದು ಬಂದ ದಾರಿಯನ್ನು ವಿವರಿಸಿದರು.
ಶಿಕ್ಷಕ ಎ.ಎ.ಖೋತ ಮಾತನಾಡಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಕೈಗೊಂಡ ಯೋಜನೆಗಳು ಹಾಗೂ ಪರೀಕ್ಷೆ ತಯಾರಿಯ ಕುರಿತು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಮಂಜುನಾಥ ಮಧುಕರ ಕುಂಬಾರ ಹಾಗೂ ಅನನ್ಯ ನರಸಪ್ಪಾ ಚೌಗಲೆ ಇವರಿಗೆ ಆದರ್ಶ ವಿದ್ಯಾರ್ಥಿ,ವಿದ್ಯಾರ್ಥಿನಿ ಪ್ರಶಸ್ತಿ, ಪ್ರಾಥಮಿಕ ವಿಭಾಾಗದ ಮಾರುತಿ ಇಂಗಳೆ, ಚೇತನ ಕೃಷ್ಣಪ್ಪ ಖೋತ ಇವರಿಗೆ ಜನರಲ್ ಪ್ರಶಸ್ತಿ ನೀಡಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ವ್ಹಿ.ಆರ್.ಭಿವಸೆ , ನಿರ್ದೇಶಕ ಮಂಡಳಿಯ ಸದಸ್ಯರಾದ ಸುಜಾತಾ ಕಬಾಡೆ, ಲತಾ ವಾಳಕೆ,ಶಿಕ್ಷಕ ವೃಂದದವರು ಇತರರು ಇದ್ದರು.