ಗಮನಸೆಳೆಯಲು ಆಟಗಾರರಿಗೆ ಟೂರ್ನಿ ಆಯ್ಕೆ ಟ್ರಯಲ್ಸ್ ಎನಿಸಿದರೆ, ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಾಬೀತುಪಡಿಸುವ ಸವಾಲು ಹೊಂದಿದ್ದಾರೆ. ಕಳೆದ ಸೆಪ್ಟೆಂಬರ್ ನಂತರ ಸ್ಪರ್ಧಾತ್ಮಕ ಕ್ರಿಕೆಟ್ ಆಡದ ಹಾರ್ದಿಕ್, ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ನಿರೀಕ್ಷೆ ಇದೆ. ಟಿ20 ನಾಯಕ ಸೂರ್ಯಕುಮಾರ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ಪೃಥ್ವಿ ಷಾ, ಸಂಜು ಸ್ಯಾಮ್ಸನ್, ವರುಣ್ ಚಕ್ರವರ್ತಿ ಟೂರ್ನಿಯಲ್ಲಿ ಆಡಲಿರುವ ಇತರ ಸ್ಟಾರ್ ಕ್ರಿಕೆಟಿಗರು.