ಕೈಗಾರಿಕೆ ಪ್ರದೇಶದ ಕೆಲ ಕಾರ್ಖಾನೆಗಳಿಂದ ಹಳ್ಳಕ್ಕೆ ವಿಷಯುಕ್ತ ತ್ಯಾಜ್ಯ ಹರಿಬಿಟ್ಟಿದ್ದರಿಂದ ಜನತೆ ಹಾಗೂ ಜಲಚರ, ಜಾನುವಾರುಗಳ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ಹೀಗಾಗಿ ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ಶ್ರೀ ಆನಂದರಾಜ ಪ್ರಭು ನೇತೃತ್ವದಲ್ಲಿ ಗುರುಗಂಗಾ ಉಳಿಸಿ ಅಭಿಯಾನದಡಿ ಪಟ್ಟಣ ಸೇರಿ ಮಾಣಿಕನಗರ, ಗಡವಂತಿ, ಮೊಳಕೇರಾ, ಬಸಂತಪುರ, ಧುಮ್ಮನಸೂರ, ಹುಡಗಿ ಇತರ ಹಳ್ಳಿ ಜನ, ಯುವಕರು, ಮಹಿಳೆಯರು, ಜನಪ್ರತಿನಿಧಿಗಳು ಹಾಗೂ ಸಂಘ&-ಸಂಸ್ಥೆಗಳ ಪ್ರಮುಖರು ಪಕ್ಷಭೇದ ಮರೆತು ಹೋರಾಟ ನಡೆಸಿದ್ದರು. ಮಂಗಳವಾರ ಬೀದರ್&-ಕಲಬುರಗಿ ಹೆದ್ದಾರಿ ಸಂಚಾರ ಸುಮಾರು ಐದು ತಾಸು ತಡೆದು ಆಕ್ರೋಶ ವ್ಯಕ್ತಪಡಿಸಿದ್ದ ಹೋರಾಟಗಾರರು, ಕೆಮಿಕಲ್ ಕಾರ್ಖಾನೆಗಳನ್ನು ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಒತ್ತಡ ಹೇರಿದ್ದರ ಫಲವಾಗಿ ನಾಲ್ಕು ಕಾರ್ಖಾನೆಗಳಿಗೆ ಬೀಗ ಜಡಿಯಲಾಗಿದೆ.