ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಿ scientific

ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಿ scientific
ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಿ scientific
Published on
ನರಸಾಪುರ: ಮಕ್ಕಳು ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ ಎಂದು ಮುಖ್ಯಶಿಕ್ಷಕ ಡಾ.ಇಂಚರನಾರಾಯಣಸ್ವಾಮಿ ತಿಳಿಸಿದರು.scientific
ಕೋಲಾರ ತಾಲೂಕು ಅಚಾಕಾರಸನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಸಿದ್ದ ಪರಿಸರ ಜಾಗೃತಿ ದಿನ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿ, ಸಂವಿಧಾನ 51(ಎ)ನೇ ವಿಧಿ ಪ್ರಕಾರ ನಮಗೆ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳನ್ನು ಪ್ರಶ್ನಿಸುವ ಬಗ್ಗೆ ಅವಕಾಶ ಮಾಡಿಕೊಟ್ಟಿದ್ದು, ನಾವು ಯಾವುದೇ ವಿಷಯ ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬಾರದು. ಮೌಢ್ಯದ ದಾರಿಯಲ್ಲಿ ನಡೆಯಬಾರದು. ಹಾಗೆಯೇ ವೈಜ್ಞಾನಿಕ ಚಿಂತನೆಗಳನ್ನು ಬಾಲ್ಯದಲ್ಲಿಯೇ ಮನಗಾಣಬೇಕು ಎಂದು ತಿಳಿಸಿದರು.
ಆಶಾ ನಾಯ್ಕ್​ ಮಾತನಾಡಿ, ವಿಜ್ಞಾನದ ಬೆಳವಣಿಗಾಗಿ ಹಲವಾರು ಮಹನೀಯರು ಆವಿಷ್ಕಾರಗಳನ್ನು ಮಾಡಿ ನಮಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ವರಲಕ್ಷ$್ಮಮ್ಮ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net