ರಾಜ್ಯಾದ್ಯಂತ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇದರಿಂದಾಗಿ ತಾಯಂದಿರ ಮರಣ ಪ್ರಮಾಣ ಜಾಸ್ತಿಯಾಗಿದೆ. ಅಪೌಷ್ಟಿಕ ನವಜಾತು ಶಿಶುಗಳ ಜನನವೂ ಏರಿಕೆಯಾಗಿದೆ. ಈ ಸಮಸ್ಯೆ ಇಂದಿಗೂ ಬಗೆಹರಿಯದೇ ಉಳಿದಿದೆ. ರಾಯಚೂರಿನಲ್ಲಿ ದಾಖಲಾದ ಬಾಲ್ಯ ವಿವಾಹ ಕೇಸ್‌ನಲ್ಲಿ 24 ವರ್ಷದ ಆರೋಪಿಯನ್ನು ಶಾಲಾ ದಾಖಲೆಯಲ್ಲಿ ಮತ್ತು ಆಕೆಯ ಆಧಾರ್ ಕಾರ್ಡ್‌ನಲ್ಲಿನ ಜನ್ಮದಿನಾಂಕದ ವ್ಯತ್ಯಾಸಗಳಿಂದ ಕರ್ನಾಟಕ ಹೈಕೋರ್ಟ್, ಕೇಸ್ ಖುಲಾಸೆಗೊಳಿಸಿದೆ. ಸಾಕಷ್ಟು ಸಂದರ್ಭದಲ್ಲಿ ಹುಡುಗಿಯರ ಸಂಬಂಧಿಕರು, ಆಧಾರ್ ಕಾರ್ಡ್‌ನಲ್ಲಿರುವ ಜನ್ಮ ದಿನಾಂಕವನ್ನು ಬದಲಾಯಿಸುತ್ತಾರೆ. ಹಾಗಾಗಿ, ಶಾಲಾ ದಾಖಲೆಗಳಲ್ಲಿ ಉಲ್ಲೇಖಿಸಿರುವ ದಿನಾಂಕವನ್ನು ವಯಸ್ಸಿನ ಪುರಾವೆಯಾಗಿ ತೆಗೆದುಕೊಳ್ಳಬೇಕು ಎಂದು ಇಲಾಖೆಗೆ ಬರೆದಿರುವ ಪತ್ರದಲ್ಲಿ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ್ ಶರ್ಮಾ ವಿವರಿಸಿದ್ದಾರೆ.