ಶಾಲಾ ಪರಿಷತ್​ ಚುನಾವಣೆ

 ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪಬ್ಲಿಕ್​ ಶಾಲೆ (ಸಿಬಿಎಸ್​ಇ)ಯಲ್ಲಿ ನಡೆದ ಶಾಲಾ ಪರಿಷತ್​ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು. ಸಂಸ್ಥೆ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿ ಬಸವರಾಜ ಬಾಲಿಕಿಲಿ ಮತ್ತು ಸುನಿಲ್​ ರಾಯವಾಡೆ, ನಿರ್ದೇಶಕರಾದ ಈರಣ್ಣ ಹಲಶೆಟ್ಟೆ, ಮಲ್ಲಿಕಾರ್ಜುನ ಚಿರಡೆ, ಪ್ರಾಚಾಯೆರ್ ಮಂಜುಶಾ ಖಂಡಾಳೆ ಇದ್ದರು.

Published on
ಬಸವಕಲ್ಯಾಣ: ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪಬ್ಲಿಕ್​ ಶಾಲೆ (ಸಿಬಿಎಸ್​ಇ)ಯಲ್ಲಿ ಬುಧವಾರ ನಡೆದ ಶಾಲಾ ಪರಿಷತ್​ ಚುನಾವಣೆಯಲ್ಲಿ ಒಟ್ಟು 58 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಹೆಡ್​ ಬಾಯ್​, ಹೆಡ್​ ಗರ್ಲ್​, ವೈಸ್​ ಹೆಡ್​ ಗರ್ಲ್​, ವೈಸ್​ ಹೆಡ್​ ಬಾಯ್​, ಸ್ಪೋರ್ಟ್ಸ್​ ಕ್ಯಾಪ್ಟನ್​, ವೈಸ್​ ಕ್ಯಾಪ್ಟನ್​, ರೆಡ್​, ಗ್ರೀನ್​, ಬ್ಲೂ, ಎಲ್ಲೊ, ಹೌಸ್​ ಕ್ಯಾಪ್ಟನ್​, ಹೌಸ್​ ವೈಸ್​ ಕ್ಯಾಪ್ಟನ್​ ಆಗಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಅನಿಲಕುಮಾರ ರಗಟೆ ಮಾತನಾಡಿ, ಮಕ್ಕಳಿಗೆ ಪುಸ್ತಕದ ಪಠ್ಯಕ್ರಮವನ್ನು ಕಲಿಸುವುದರ ಜತೆಗೆ ಪ್ರಾಯೋಗಿಕವಾಗಿ ಈ ರೀತಿ ಚುನಾವಣೆ ನಡೆಸುವುದು ಉತ್ತಮವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ಕೋಶಾಧ್ಯಕ್ಷ ಜಗನ್ನಾಥ ಖೂಬಾ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿ ಬಸವರಾಜ ಬಾಲಿಕಿಲಿ ಮತ್ತು ಸುನಿಲ್​ ರಾಯವಾಡೆ, ನಿರ್ದೇಶಕರಾದ ಈರಣ್ಣ ಹಲಶೆಟ್ಟೆ, ಮಲ್ಲಿಕಾರ್ಜುನ ಚಿರಡೆ ಇದ್ದರು. ಪ್ರಾಚಾಯೆರ್ ಮಂಜುಶಾ ಖಂಡಾಳೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಯಕತ್ವದ ಪ್ರತಿಜ್ಞೆ ಭೋದಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳಾದ ಶರಣು ಮತ್ತು ವಿಕಾಂಕ್ಷ ನಿರೂಪಣೆ ಮಾಡಿದರು. ಸಹ ಶಿಕ್ಷಕ ಪ್ರಸಾದ್​ ಮಠಪತಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net