ವಿದ್ಯಾರ್ಥಿವೇತನ ಸದುಪಯೋಗಪಡಿಸಿಕೊಳ್ಳಲಿ

ಬೆಳಗಾವಿ ನಗರದ ಕೆಎಲ್​ಎಸ್​ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀನಿಧಿ ಸೊಂಡೂರು ಎಂಡೋಮೆಂಟ್​ ವಿದ್ಯಾರ್ಥಿವೇತನ ವಿತರಿಸಲಾಯಿತು. ಭೂಷಣ ಬೋರಸೆ, ರಾಜೇಂದ್ರ ಬೆಳಗಾಂವಕರ್​, ಡಾ.ಎಂ.ಎಸ್​.ಪಾಟೀಲ ಇದ್ದರು.
ಬೆಳಗಾವಿ ನಗರದ ಕೆಎಲ್​ಎಸ್​ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀನಿಧಿ ಸೊಂಡೂರು ಎಂಡೋಮೆಂಟ್​ ವಿದ್ಯಾರ್ಥಿವೇತನ ವಿತರಿಸಲಾಯಿತು. ಭೂಷಣ ಬೋರಸೆ, ರಾಜೇಂದ್ರ ಬೆಳಗಾಂವಕರ್​, ಡಾ.ಎಂ.ಎಸ್​.ಪಾಟೀಲ ಇದ್ದರು.
Published on
ಬೆಳಗಾವಿ: ಸರ್ಕಾರ, ಸಂ ಸಂಸ್ಥೆಗಳು ನೀಡುವ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಜೀವನದ ಗುರಿ ಸಾಧನೆಗೆ ಮುಂದಾಗಬೇಕು ಎಂದು
ಕೆಎಲ್​ಎಸ್​ ಸಂಸ್ಥೆಯ ಆಡಳಿತ ಮಂಡಳಿ ಅಧ್ಯ ರಾಜೇಂದ್ರ ಬೆಳಗಾಂವಕರ್​ ಸಲಹೆ ನೀಡಿದರು.
ನಗರದ ಕೆಎಲ್​ಎಸ್​ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಿವಂಗತ ಶ್ರೀನಿಧಿ ಸೊಂಡೂರರ ಸ್ಮರಣಾರ್ಥವಾಗಿ ನೀಡುವ ಶ್ರೀನಿಧಿ ಸೊಂಡೂರು ಎಂಡೋಮೆಂಟ್​ ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿವೇತನ, ಪ್ರಶಸ್ತಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿವೆ. ಡಾ.ವಿಲಾಸ ಸೊಂಡೂರು (ಯಾಂತ್ರಿಕ ವಿಭಾಗ), ಡಾ.ವಿನಿತಾ ಸೊಂಡೂರು
(ಭೌತಶಾಸ ವಿಭಾಗ) ಹಾಗೂ ಅವರ ಪುತ್ರ ಪವನ ಸೊಂಡೂರು ಅವರು ಇದನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು. ಪ್ರತಿ ವರ್ಷ ವಿವಿಧ ವಿಭಾಗಗಳ ಐದು ಶ್ರೇಷ್ಠ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ಯೋಜನೆಯಡಿ ಪ್ರತಿ ವರ್ಷ 20 ವಿದ್ಯಾರ್ಥಿಗಳಿಗೆ ಸಹಾಯ ಒದಗಿಸುವ ಗುರಿ ಹೊಂದಲಾಗಿದೆ ಎಂದರು. ಪ್ರಸ್ತುತ ವರ್ಷ ವಿದ್ಯಾರ್ಥಿವೇತನವನ್ನು ಅದಿತಿ ಕಾಮತ, (ಕಂಪ್ಯೂಟರ್​ ಸೈನ್ಸ್​), ಅಥರ್ವ ಧುಮಲೆ (ಎಲೆಕ್ಟ್ರಾನಿಕ್​ ಕಮ್ಯುನಿಕೇಶನ್​) ಮಿಸ್ಬಾ ಕೆ. (ಕಂಪ್ಯೂಟರ್​ ಸೈನ್ಸ್​), ಧನರಾಜ ಪಾಟೀಲ (ಮೆಕಾನಿಕಲ್​) ಪ್ರಶಾಂತ ದಂಡಡ್ಡು (ಏರೋನಾಟಿಕಲ್​) ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು. ನಗರ ಪೊಲೀಸ್​ ಆಯುಕ್ತ ಭೂಷಣ ಬೋರಸೆ, ಪ್ರಾಂಶುಪಾಲ ಡಾ.ಎಂ.ಎಸ್​ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net