ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಈ ಹಿಂದೆ ಶೇ.17 ಮೀಸಲಾತಿಯಲ್ಲಿ ಎಡಗೈ ಸಮುದಾಯಕ್ಕೆ ಶೇ. 6, ಬಲಗೈ ಸಮುದಾಯಕ್ಕೆ ಶೇ. 6 ಹಾಗೂ ಇತರೆ ಸಮುದಾಯಗಳಿಗೆ ಶೇ. 5ರಷ್ಟು ಸರ್ವಸಮ್ಮತದಿಂದ ಒಳಮೀಸಲಾತಿ ಅಳವಡಿಸುವ ಬಗ್ಗೆ ತೀರ್ಮಾನ ಮಾಡಿತ್ತು. ಆದರೆ, ಮೀಸಲಾತಿ ಪ್ರಮಾಣ ಶೇ. 50ರಷ್ಟು ಮೀರಬಾರದು ಎಂಬ ಸುಪ್ರೀಂ ಆದೇಶ ಹಿನ್ನೆಲೆ ಇಂದು ಶೇ.15 ಎಸ್ಸಿ ಮೀಸಲಾತಿಯಲ್ಲೇ ಬಲಗೈ ಸಮುದಾಯುಕ್ಕೆ 5, ಎಡಗೈ 5 ಮತ್ತು ಇತರ ಸಮುದಾಯಗಳಿಗೂ 5 ಮೀಸಲಾತಿ ನೀಡುವ ಮೂಲಕ ಸಮಾನ ಹಂಚಿಕೆ ಮಾಡಲಾಗಿದೆ.