ಸಂಚಾರಿ ನಿಯಮ ಪಾಲನೆಯಿಂದ ಜೀವ ರಕ್ಷಣೆ

Saving lives by obeying traffic rules
Saving lives by obeying traffic rules
Published on
ಕೊರಟಗೆರೆ : ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ವಾಹನ ಚಾಲಕರು ತಪ್ಪದೇ ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಪಿಎಸ್‌ಐ ಅಭಿಷೇಕ್ ತಿಳಿಸಿದರು.
ತಾಲೂಕಿನ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಇರಕಸಂದ್ರ ಕಾಲನಿ, ಪಾತಗಾನಹಳ್ಳಿ, ವಾವತೂರು, ವಜ್ಜನಕುರಿಕೆ ಗ್ರಾಮ ಸೇರಿ ಇತರೆ ಪ್ರದೇಶಗಳಲ್ಲಿ ಟ್ರ್ಯಾಕ್ಟರ್‌ಗಳಿಗೆ ರೇಡಿಯಮ್ ಸ್ಟಿಕ್ಕರ್ ಅಳವಡಿಸಿ, ಆಟೋ ಚಾಲಕರು ಹಾಗೂ ಬಸ್ ವಾಲೀಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಾತನಾಡಿದರು.
ಕೇವಲ ವಾಹನ ಪರವಾನಿಗೆ ಹೊಂದಿರುವುದೇ ಸಾಕಾಗುವುದಿಲ್ಲ. ವಾಹನವನ್ನು ಸದಾ ಸುಸ್ಥಿತಿಯಲ್ಲಿ ನಿರ್ವಹಿಸಬೇಕು. ಬೆಳಕು ವ್ಯವಸ್ಥೆ, ಬ್ರೇಕ್‌ಗಳು, ರಿಫ್ಲೆಕ್ಟರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಣ್ಣ ಅಜಾಗರೂಕತೆಯೇ ದೊಡ್ಡ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಾವಶ್ಯಕ ಎಂದು ಹೇಳಿದರು.
ರಸ್ತೆ ಸುರಕ್ಷತೆ ಕುರಿತು ಪೊಲೀಸ್ ಇಲಾಖೆ ಕೈಗೊಂಡಿರುವ ಜಾಗೃತಿ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ನಿಯಮ ಪಾಲನೆಯ ಮೂಲಕವೇ ಜೀವ ರಕ್ಷಣೆ ಸಾಧ್ಯ ಎಂದು ಹೆಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net