ಪಂಚಾಯಿತಿ ವ್ಯಾಪ್ತಿಯ ಪ್ರಗತಿಯಿಂದ ತೃಪ್ತಿ panchayat

ಪಂಚಾಯಿತಿ ವ್ಯಾಪ್ತಿಯ ಪ್ರಗತಿಯಿಂದ ತೃಪ್ತಿ panchayat
ಪಂಚಾಯಿತಿ ವ್ಯಾಪ್ತಿಯ ಪ್ರಗತಿಯಿಂದ ತೃಪ್ತಿ panchayat
Published on
ಶ್ರೀನಿವಾಸಪುರ: ಆಡಳಿತ ಸದಸ್ಯರ ಸಹಕಾರದಿಂದ ಹಳ್ಳಿಗಳ ಅಭಿವೃದ್ಧಿಯಾಗಿದೆ. ಪಂಚಾಯಿತಿಗೆ ಕಾಂಪೌಂಡ್​, ಉಗ್ರಾಣ ಕೊಠಡಿ, ಪೋಡಿ ಅದಾಲತ್​, ಇ&ಸ್ವತ್ತು, ಆರೋಗ್ಯ ಶಿಬಿರ, ಮಾಸಾಶನ ಆಂದೋಲನ ನಡೆಸಿ ಜನತೆಗೆ ಸೌಲಭ್ಯ ತಲುಪಿಸಿದ ತೃಪ್ತಿ ಇದೆ ಎಂದು ಹೊದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಲಪಲ್ಲಿ ಶ್ರೀನಿವಾಸ್​ ತಿಳಿಸಿದರು. panchayat
ತಾಲೂಕಿನ ಹೊದಲಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚುನಾಯಿತ ಸದಸ್ಯರ ಕೊನೆಯ ಸಭೆಯಲ್ಲಿ ಮಾತನಾಡಿ, 5 ವರ್ಷಗಳಿಂದ 3&4 ಮಂದಿ ಅಧ್ಯಕ್ಷರಾಗಿ ಆಯ್ಕೆಯಾಗಿ ಹೋಗಿದ್ದಾರೆ. ಎಲ್ಲ ಹಳ್ಳಿಗಳಿಗೂ ಒತ್ತು ನೀಡಲಾಗಿದ್ದೂ, ದೇವಲಪಲ್ಲಿ ಗ್ರಾಮದಲ್ಲಿ ಶಾಲಾ ಕಟ್ಟಡ ದುರಸ್ತಿ, ಅಂಗನವಾಡಿ, ಶೌಚಗೃಹ ನಿರ್ಮಾಣ ಮಾಡಲಾಗಿದೆ ಎಂದರು.
ಪಂಚಾಯಿತಿ ಅಭಿವೃದ್ಧಿ, ಅನುದಾನಗಳ ಬಳಕೆ, ಖರ್ಚು&ವೆಚ್ಚಗಳ ನಿರ್ವಹಣೆ ಬಗ್ಗೆ ಗ್ರಾಮದ ಮಾಜಿ ಸದಸ್ಯರುಗಳ ಗಮನಕ್ಕೆ ತಂದು ಕೆಲಸ ಕಾರ್ಯ ಮಾಡುವುದು ಸೂಕ್ತ ಎಂದು ತಿಳಿಸಿದರು.
ಕಾರ್ಯದರ್ಶಿ ಶಿವಶಂಕರ್​ ರಾಜು, ಕರ ವಸೂಲಿಗಾರ ಅಶೋಕ್​, ರವಿ, ಗಣಕಯಂತ್ರ ನಿರ್ವಾಹಕ ವಿನೋದ, ಮಹಿಳಾ ಸಂಗಳ ಸಂಪನ್ಮೂಲ ವ್ಯಕ್ತಿ ಈಶ್ವರಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net