

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಹಬ್ಬ ಹರಿದಿನಗಳುಬಂದಾಗ ಮನೆಗಳಲ್ಲಿ ಮಹಿಳೆಯರಸಡಗರ ಸಂಭ್ರಮ ಹೆಚ್ಚಾಗಿರುತ್ತದೆ.ಅದರಲ್ಲೂ ಸುಗ್ಗಿಹಬ್ಬ ಎಂದೇ ಪ್ರಸಿದ್ದವಾಗಿರುವಸಂಕ್ರಾಂತಿಯ ಸಂಭ್ರಮ ನಗರದಎಲ್ಲೆಡೆ ಅದ್ದೂರಿಯಾಗಿ ಕಂಡುಬಂತು. ಮನೆಗಳಮುಂದೆ ಬಣ್ಣ ಬಣ್ಣದ ಚಿತ್ತಾರದರಂಗೋಲಿಗಳನ್ನು ಹಾಕಿ,ಕಬ್ಬಿನ ಜಲ್ಲೆ,ಮಾವಿನ ತೋರಣದಿಂದಸಿಂಗರಿಸಿ ಹಬ್ಬವನ್ನು ಆಚರಿಸಲಾಯಿತು.
ವಿಶೇಷವಾಗಿಮಹಿಳೆಯರು ಮಕ್ಕಳು ಹೊಸ ಉಡುಗೆಗಳನ್ನುತೊಟ್ಟು ಗೋದೂಳೀ ಸಮಯದಲ್ಲಿ ಎಳ್ಳುಬೀರುವ ಮೂಲಕ ಸಾಂಸ್ಕೃತಿಕ ಸೊಗಡನ್ನುನೆನಪಿಸಿದರು.ಬೆಳಗ್ಗೆಯಿಂದಲೇಬೆಂಗಳೂರಿನ ದೇವಾಲಯಗಳಲ್ಲಿಭಕ್ತರು ಸಂಖ್ಯೆ ಹೆಚ್ಚಾಗಿತ್ತು.ವಿಶೇಷವಾಗಿನವಗ್ರಹಗಳಿರುವ ದೇವಾಲಯಗಳಿಗೆಭೇಟಿ ನೀಡಿದ ಭಕ್ತರು ಸೂರ್ಯನಾರಾಯಣನಿಗೆಪೂಜೆ ಸಲ್ಲಿಸಿದರು.
ಕೆಲವುಬಡಾವಣೆಗಳಲ್ಲಿ ಸಾಂಸ್ಕೃತಿಕಸಂಘಟನೆಗಳು ಸಂಕ್ರಾಂತಿ ಹಬ್ಬವನ್ನುಆಯೋಜಿಸಿ ದೇವರ ನಾಮ ಕೀರ್ತನೆ,ಭಜನೆ ಮತ್ತುಜನಪದ ಗೀತ ಗಾಯನ ಮತ್ತಿತರ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಏರ್ಪಡಿಸಿ,ಆಗಮಿಸಿದವರಿಗೆಎಳ್ಳುಬೆಲ್ಲ,ಕಬ್ಬು ವಿತರಿಸಿಶುಭ ಕೋರಿದರು.
ಮುಜರಾಯಿಇಲಾಖೆಯು ಎ ಮತ್ತು ಬಿ ದರ್ಜೆದೇವಾಲಯಗಳಲ್ಲಿ ಸಂಕ್ರಾಂತಿಪ್ರಯುಕ್ತ ವಿಶೇಷ ಪೂಜೆಯು ಜೊತೆಗೆಆಗಮಿಸುವ ಭಕ್ತರಿಗೆ ಎಳ್ಳುಬೆಲ್ಲನೀಡುವಂತೆ ಆದೇಶ ನೀಡಿತ್ತು. ಇದಕ್ಕಾಗಿ ಇಲಾಖೆಯಾವುದೇ ವಿಶೇಷ ಅನುದಾನವನ್ನುನೀಡದೆ ದೇವಾಲಯದ ಆಡಳಿತ ಮಂಡಳಿಯೇಇದನ್ನು ನಿರ್ವಹಿಸುವಂತೆ ಸೂಚನೆನೀಡಿತ್ತು. ಆದರೆತಡವಾಗಿ ಆದೇಶ ಪ್ರತಿ ದೊರೆತಹಿನ್ನೆಲೆಯಲ್ಲಿ,ಕೊನೇ ಘಳಿಗೆಯಲ್ಲಿವ್ಯವಸ್ಥೆ ಮಾಡಲಾಗದೆ ಆಗಮಿಸಿದಎಲ್ಲ ಭಕ್ತರಿಗೂ ಎಳ್ಳುಬೆಲ್ಲದೊರೆಯಲಿಲ್ಲ ಎಂಬ ಆರೋಪ ಕೇಳಿಬಂದಿದೆ.ಸಾಂಕೇತಿಕವಾಗಿ50-100 ಜನರಿಗೆಮಾತ್ರ ಎಳ್ಳುಬೆಲ್ಲವನ್ನುವಿತರಿಸಲಾಗಿದೆ.ಬಸವನಗುಡಿಯದೊಡ್ಡ ಗಣಪತಿ,ದೊಡ್ಡ ಬಸವಣ್ಣ,ವಿವಿಪುರಂಸುಬ್ರಮಣ್ಯ ದೇವಾಲಯ,ಮಹಾಲಕ್ಷ್ಮೀಲೇಔಟ್ ವೀರಾಂಜನೇಯ,ಜಯನಗರ 4ನೇಬ್ಲಾಕ್ ಸಿದ್ಧಿವಿನಾಯಕ,ಬನಶಂಕರಿ,ಮಲ್ಲೇಶ್ವರದದಕ್ಷಿಣಕಾಶಿ,ಕಾಡು ಮಲ್ಲೇಶ್ವರಮತ್ತಿತರ ದೇವಾಲಯಗಳಲ್ಲಿ ದಿನಪೂರ್ತಿಭಕ್ತರು ಆಗಮಿಸಿ ದೇವರ ದರ್ಶನಪಡೆದು ಪೂಜೆ ಸಲ್ಲಿಸಿದರು.
ಸಂಕ್ರಾಂತಿಹಬ್ಬದ ಪ್ರಮುಖ ಆಕರ್ಷಣೆ ಕಿಚ್ಚುಹಾಯಿಸುವುದು.ಗ್ರಾಮೀಣಪ್ರದೇಶಗಳಲ್ಲಿ ಪ್ರಮುಖವಾಗಿರುವಕಿಚ್ಚು ಹಾಯಿಸುವ ದೃಶ್ಯ ನಗರದ ವಿವಿಧೆಡೆಗಳಲ್ಲೂ ಕಂಡು ಬಂತು.ನಗರದ ಹೊರವಲಯದಲ್ಲಿರುವ ಯಲಹಂಕ,ಕೆ.ಆರ್.ಪುರ,ಮಹದೇವಪುರ,ಹೊಸೂರು ರಸ್ತೆ,ಮೈಸೂರು ರಸ್ತೆ,ಮಾಗಡಿ ರಸ್ತೆ,ತುಮಕೂರು ರಸ್ತೆಯವಿವಿಧೆಡೆ ರಸ್ತೆಗಳಲ್ಲಿ ಕಿಚ್ಚುಹೊತ್ತಿಸಿ ಎತ್ತುಗಳನ್ನು ಹಾಯಿಸುವಮೂಲಕ ಜನ ಸಂಭ್ರಮ ಪಟ್ಟರು.ನಗರದ ನಡುವೆಯೂವಿಜಯನಗರದ ಹೊಸಹಳ್ಳಿ,ಕನಕನಪಾಳ್ಯಸೇರಿದಂತೆ ಹೆಚ್ಚಾಗಿ ಜಾನುವಾರುಗಳನ್ನುಸಾಕುವ ಪ್ರದೇಶದ ಮೈದಾನ ಮತ್ತುರಸ್ತೆಗಳಲ್ಲಿ ಕಿಚ್ಚು ಹಾಕಿಜಾನುವಾರುಗಳನ್ನು ಅದರಲ್ಲಿಹಾಯಿಸಿ ಜನ ಖುಷಿ ಪಟ್ಟರು.
ಸಂಕ್ರಾಂತಿಹಬ್ಬದ ರಜೆಯಿಂದಾಗಿ ಬೆಂಗಳೂರಿನಲ್ಲಿರುವಬಹುತೇಕ ಹೊರ ಊರಿನವರು ತಮ್ಮ ತಮ್ಮಊರುಗಳಿಗೆ ಹೋಗಿರುವುದರಿಂದಾಗಿಗುರುವಾರ ನಗರದಲ್ಲಿ ಸಂಚಾರಸಿಕ್ಕಿಗೆ ಅಲ್ಪ ವಿರಾಮ ಬಿದ್ದಿತ್ತು.ಬಹುತೇಕ ರಸ್ತೆಗಳುವಾಹನ ದಟ್ಟಣೆ ಇಲ್ಲದೆ ಖಾಲಿಯಾಗಿದ್ದದೃಶ್ಯ ಸಾಮಾನ್ಯವಾಗಿತ್ತು.ಸರ್ಕಾರಿ ಮತ್ತುಖಾಸಗಿ ಕಚೇರಿಗಳು ರಜೆ ಇರುವುದರಿಂದಬಿಎಂಟಿಸಿ ಬಸ್‌ಗಳ ಸಂಖ್ಯೆಯೂವಿರಳವಾಗಿತ್ತು.ಹಬ್ಬದ ರಜೆಯಜೊತೆಗೆ ವಾರಂತ್ಯದ ಶನಿವಾರ,ಭಾನುವಾರಇರುವುದರಿಂದ ಇನ್ನೂ ಎರಡು ದಿನಸಂಚಾರ ಸಕ್ಕಿಗೆ ಅಲ್ಪವಿರಾಮಮುಂದುವರೆಯುವ ಸಾಧ್ಯತೆ ಇದೆ.