ಚಿನ್ನಾಭರಣವಿದ್ದ ಪರ್ಸ್​ ಮರಳಿಸಿದ ಸಂಗಮನಾಥ

ಹುಮನಾಬಾದ್​ ಬಸ್​ನಲ್ಲಿ ಸಿಕ್ಕಿದ್ದ 10 ತೊಲಾ ಚಿನ್ನಾಭರಣವಿದ್ದ ಪರ್ಸ್​ನ್ನು ಮಹಿಳೆಗೆ ಹಸ್ತಾಂತರಿಸಿದ ವೇಳೆ ಪಿಎಸ್​ಐ ಸುರೇಶಕುಮಾರ ಚವ್ಹಾಣ್​ ಅವರು ಕೆಎಸ್​ಆರ್​ಟಿಸಿ ನಿರ್ವಾಹಕ ಸಂಗಮನಾಥ ಅವರನ್ನು ಸನ್ಮಾನಿಸಿದರು.
ಹುಮನಾಬಾದ್​ ಬಸ್​ನಲ್ಲಿ ಸಿಕ್ಕಿದ್ದ 10 ತೊಲಾ ಚಿನ್ನಾಭರಣವಿದ್ದ ಪರ್ಸ್​ನ್ನು ಮಹಿಳೆಗೆ ಹಸ್ತಾಂತರಿಸಿದ ವೇಳೆ ಪಿಎಸ್​ಐ ಸುರೇಶಕುಮಾರ ಚವ್ಹಾಣ್​ ಅವರು ಕೆಎಸ್​ಆರ್​ಟಿಸಿ ನಿರ್ವಾಹಕ ಸಂಗಮನಾಥ ಅವರನ್ನು ಸನ್ಮಾನಿಸಿದರು.
Published on
ಹುಮನಾಬಾದ್​: ಬಸ್​ನಲ್ಲಿ ಮರೆತು ಬಿಟ್ಟಿದ್ದ ಸುಮಾರು 10 ತೊಲಾ ಚಿನ್ನಾಭರಣವಿದ್ದ ಪರ್ಸ್​ನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸಿ ವಾರಸುದಾರರಿಗೆ ತಲುಪಿಸುವ ಮೂಲಕ ಕೆಎಸ್​ಆರ್​ಟಿಸಿ ಹುಮನಾಬಾದ್​ ಟಕದ ನಿರ್ವಾಹಕ ಸಂಗಮನಾಥ ಪ್ರಾಮಾಣಿಕತೆ ಮೆರೆದಿದ್ದಾರೆ.
ಜೇವರ್ಗಿ ಮೂಲದ ಆರತಿ ದಿನೇಶ್​ ಠಾಕೂರ್​ ಅವರು ಬುಧವಾರ ದುಬಲಗುಂಡಿಯಿಂದ ಹುಮನಾಬಾದ್​ಗೆ ಬಸ್​ನಲ್ಲಿ ಪ್ರಯಾಣಿಸಿದ್ದರು. ಬಸ್​ನಿಂದ ಇಳಿಯುವಾಗ ಪರ್ಸ್​ ಆಸನದ ಮೇಲೆ ಮರೆತು ಹೋಗಿದ್ದರು. ನಂತರ ಹುಮನಾಬಾದ್​ ಪೊಲೀಸ್​ ಠಾಣೆಗೆ ದೂರು ನೀಡಿದರು. ದೂರು ಸ್ವೀಕರಿಸಿದ ಪಿಎಸ್​ಐ ಸುರೇಶಕುಮಾರ್​ ಚವ್ಹಾಣ್​ ಹಾಗೂ ಸಿಬ್ಬಂದಿ ತಕ್ಷಣ ಕಾರ್ಯಪ್ರರ್ವತರಾಗಿ ಬಸ್​ ನಿಲ್ದಾಣ ಹಾಗೂ ಡಿಪೋದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಮಹಿಳೆ ಪ್ರಯಾಣಿಸಿದ್ದ ಕೆಎ- 39 ಎಫ್​- 956 ಸಂಖ್ಯೆಯ ಬಸ್​ ಪತ್ತೆಯಾದ ಬಳಿಕ ನಿರ್ವಾಹಕ ಸಂಗಮನಾಥ ಅವರನ್ನು ಸಂಪರ್ಕಿಸಿದರು. ಬಸ್​ನಲ್ಲಿ ಸಿಕ್ಕಿದ್ದ ಪರ್ಸ್​ ಸುರಕ್ಷಿತವಾಗಿ ಇಟ್ಟಿರುವುದಾಗಿ ತಿಳಿಸಿ, ಅದನ್ನು ಪೊಲೀಸರಿಗೆ ಹಸ್ತಾಂತರಿಸಿದರು.
ಪಿಎಸ್​ಐ ಸುರೇಶಕುಮಾರ ಸಂಗಮನಾಥ ಅವರ ಪ್ರಾಮಾಣಿಕತೆ ಶ್ಲಾಘಿಸಿ ಸನ್ಮಾನಿಸಿದರು. ಸಾರ್ವಜನಿಕರ ಕಳೆದುಹೋದ ವಸ್ತುಗಳನ್ನು ಸುರಕ್ಷಿತವಾಗಿ ವಾರಸುದಾರರಿಗೆ ತಲುಪಿಸಿದ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಸಿಬ್ಬಂದಿ ಎಸ್​.ಬಿ.ಮಂಜುನಾಥ ರೆಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net