

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಸಮತ್ವಫೌಂಡೇಶನ್ ವತಿಯಿಂದ ಆಯೋಜಿಸಲಾಗಿರುವಎರಡು ದಿನಗಳ ಭಾರತೀಯ ಶಾಸ್ತ್ರೀಯಸಂಗೀತೋತ್ಸವ ‘ಸಮತ್ವ ಸಂಭ್ರಮ2026’ಕ್ಕೆಬುಧವಾರ ಅದ್ಧೂರಿ ಚಾಲನೆ ದೊರೆಯಿತು.
ಸದಾಶಿವನಗರದಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಸಂಗೀತ ವಿದ್ವಾಂಸರಸಂಗೀತ ಪ್ರದರ್ಶನಗಳು ಮೊದಲ ದಿನವೇಸಂಗೀತಾಸಕ್ತರ ಮನತಣಿಸಿದವು.
ಕಾರ್ಯಕ್ರಮದಮೊದಲ ಭಾಗದಲ್ಲಿ ಅಂತರರಾಷ್ಟ್ರೀಯತಬಲಾ ವಿದ್ವಾಂಸ ಪಂಡಿತ್ ಯೋಗೇಶ್ಸಾಮ್ಸಿ ಅವರು ಏಕವ್ಯಕ್ತಿ ತಬಲಾವಾದನದ ಮೂಲಕ ತಮ್ಮ ಅಸಾಧಾರಣಲಯಪ್ರಜ್ಞೆ,ತಾಂತ್ರಿಕನೈಪುಣ್ಯ ಹಾಗೂ ಸೃಜನಶೀಲತೆಯನ್ನುಅನಾವರಣಗೊಳಿಸಿ ಪ್ರೇಕ್ಷಕರಿಂದಭಾರೀ ಮೆಚ್ಚುಗೆ ಗಳಿಸಿದರು.
ಬಳಿಕನಡೆದ ‘ಸ್ಟ್ರಿಂಗ್ಸ್ ಅಟ್ಯಾಚ್ಡ್’ವಿಶೇಷ ಸಂಗೀತ ಕಾರ್ಯಕ್ರಮವುಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.ಖ್ಯಾತ ವಯೋಲಿನ್ವಿದ್ವಾಂಸ ವಿದ್ವಾನ್ ಆರ್.ಕುಮಾರೇಶ್,ಪ್ರಸಿದ್ಧ ವೀಣಾವಿದುಷಿ ಡಾ.ಜಯಂತಿ ಕುಮಾರೇಶ್,ಹೆಸರಾಂತ ತಾಳವಾದ್ಯಕಲಾವಿದ ವಿದ್ವಾನ್ ಕೆ.ಸಾಯಿ ಗಿರಿಧರ್ಒಂದೇ ವೇದಿಕೆಯಲ್ಲಿ ನೀಡಿದ ಅಪೂರ್ವಸಂಗೀತ ಸಂಯೋಜನೆ ಪ್ರೇಕ್ಷಕರನ್ನುಮಂತ್ರಮುಗ್ಧರನ್ನಾಗಿಸಿತು.
ಉತ್ಸವದಎರಡನೇ ದಿನವಾದ ಗುರುವಾರ (ಆ.6)‘ಕಾಶಿ ಡಮರು’ಹಾಗೂ ‘ಸ್ಪೆಷಲ್ ಮ್ಯೂಸಿಕಲ್ಕಾಂಫ್ಲುವೆನ್ಸ್’ ಕಾರ್ಯಕ್ರಮಗಳುನಡೆಯಲಿದ್ದು,ಖ್ಯಾತ ಕರ್ಣಾಟಕಸಂಗೀತ ಗಾಯಕ ವಿದ್ವಾನ್ ಅಭಿಷೇಕ್ರಘುರಾಮ್ ಸೇರಿದಂತೆ ದೇಶದ ಹೆಸರಾಂತಸಂಗೀತ ವಿದ್ವಾಂಸರು ಭಾಗವಹಿಸಲಿದ್ದಾರೆಎಂದು ಸಮತ್ವ ಫೌಂಡೇಶನ್ ತಿಳಿಸಿದೆ.