ಪ್ರಸ್ತುತ ವ್ಯವಸ್ಥೆಯಲ್ಲಿ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಡಿ ಪೋರ್ಟಲ್‌ಗಳ ಮೂಲಕ ದತ್ತಾಂಶಗಳ ಸಂಗ್ರಹ ನಡೆಯುತ್ತಿದ್ದರೂ, ಕೈಬರಹ ಆಧಾರಿತ ನಮೂದು ವಿಧಾನದಲ್ಲಿ ದತ್ತಾಂಶದ ಗುಣಮಟ್ಟ ಕುಸಿಯುತ್ತಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆ ಪರಿಹರಿಸಲು, ಮೂಲಸ್ಥಾನದಲ್ಲಿಯೇ ದತ್ತಾಂಶವನ್ನು ಡಿಜಿಟಲೀಕರಣಗೊಳಿಸಲು ನೂತನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರಲ್ಲಿ ಆಶಾ ಡೈರಿಯಲ್ಲಿರುವ 485 ಅಂಶಗಳನ್ನು ಸರಳೀಕರಿಸಿ 134 ಪ್ರಮುಖ ದತ್ತಾಂಶ ಅಂಶಗಳಿಗೆ ಇಳಿಸಲಾಗಿದೆ. ಪುನರಾವರ್ತಿತ ಅಂಶಗಳನ್ನು ಕಡಿಮೆ ಮಾಡಲಾಗಿದ್ದು, ಇದರಿಂದ ಶೇ.75 ಕಾರ್ಯಭಾರ ಇಳಿಕೆಯಾಗಲಿದೆ. ಈ ವ್ಯವಸ್ಥೆಯು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.