ಹೋಮ್​ ಸ್ಟೇನಲ್ಲಿ ಸಾಯಿ ಸುರಭಿ ಆತ್ಮಹತ್ಯೆ ಪ್ರಕರಣ

ಪ್ರಿಯಕರ ಸಂಚಿತ್​ ಆಲಿ ವಶ
ಪ್ರಿಯಕರ ಸಂಚಿತ್​ ಆಲಿ ವಶ
Published on
ಚಿಕ್ಕಬಳ್ಳಾಪುರ : ಮುದ್ದೇನಹಳ್ಳಿ ಸಮೀಪದ ಹೋಮ್​ ಸ್ಟೇನಲ್ಲಿ ಸಾಯಿ ಸುರಭಿ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಪ್ರಿಯಕರ ಸಂಚಿತ್​ ಆಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಿಯತಮೆಯ ಜತೆಗೆ ವಿಷದಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚೇತರಿಸಿಕೊಂಡಿರುವ ಆಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬುಧವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆತ್ಮಹತ್ಯೆಗೆ ಜೋಡಿ ನಿರ್ಧಾರ: ಅಂತರ್​ ಧಮೀರ್ಯ ವಿವಾಹಕ್ಕೆ ಪಾಲಕರು ಒಪ್ಪಿಕೊಳ್ಳದಿರುವುದರಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದು ಮೊದಲು ಸಾಯಿ ಸುರಭಿ ಬಳಿ ಇದ್ದ ಮಾತ್ರೆಗಳನ್ನು ಸೇವಿಸುವುದು, ಇದರ ನಡುವೆಯೂ ಒಂದು ವೇಳೆ ಯಾರಾದರೂ ಬದುಕಿದರೆ ನೇಣು ಹಾಕಿಕೊಂಡು ಸಾಯುವ ಮಾತುಕತೆ ನಡೆದಿತ್ತು ಎಂದು ಪೊಲೀಸ್​ ತನಿಖೆ ವೇಳೆ ಆರೋಪಿ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದ ಹಿನ್ನೆಲೆ
ಜೂ.29ರಂದು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಖಾಸಗಿ ಹೋಮ್​ ಸ್ಟೇನಲ್ಲಿ ಫಿಜಿಯೋಥೆರಪಿಸ್ಟ್​ ಸಾಯಿ ಸುರಭಿ ಮೃತದೇಹ ಪತ್ತೆಯಾಗಿತ್ತು. ಇದೇ ಕೊಠಡಿಯಲ್ಲಿ ಸಂಚಿತ್​ ಆಲಿ ಅಸ್ವಸ್ಥಗೊಂಡು ಬಿದ್ದಿದ್ದು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆನ್​ಲೈನ್​ ಮೂಲಕ ಹೋಮ್​ ಸ್ಟೇ ಕೊಠಡಿಯನ್ನು ಬುಕ್​ ಮಾಡಿದ್ದ ಆಲಿ ಪ್ರಿಯತಮೆಯೊಂದಿಗೆ ಉಳಿದುಕೊಂಡಿದ್ದ. ಸೋಮವಾರ ಚೆಕ್​ ಔಟ್​ ಆಗಬೇಕಾಗಿತ್ತು. ಆದರೆ, ಕೊಠಡಿ ಬಾಗಿಲು ತೆರೆದು ಯಾರೂ ಹೊರ ಬಂದಿಲ್ಲ. ಇದರಿಂದ ಅನುಮಾನಗೊಂಡು ಸಿಬ್ಬಂದಿ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ದುರ್ಟನೆಯು ಬೆಳಕಿಗೆ ಬಂದಿತ್ತು.
ಲವ್​ ಜಿಹಾದ್​ ಆರೋಪ
ಮಗಳ ಆತ್ಮಹತ್ಯೆಗೆ ಸಂಚಿತ್​ ಆಲಿಯೇ ನೇರ ಕಾರಣ. ಇದೊಂದು ಲವ್​ ಜಿಹಾದ್​ ಎಂಬುದಾಗಿ ಮೃತಳ ತಾಯಿ ಗೀತಾ ಆರೋಪಿಸಿದ್ದರು. ಕ್ಯಾಬ್​ ಚಾಲಕನಾಗಿದ್ದ ಆಲಿ ಮಗಳನ್ನು ಪರಿಚಯಿಸಿಕೊಂಡಿದ್ದ, ಮಾದಕ ವಸ್ತುಗಳ ವ್ಯಸನಿಯನ್ನಾಗಿಸಿದ್ದ. ಮದುವೆಯಾಗುವುದಾಗಿ ಹೇಳಿ, ಬೆದರಿಸಿ ಸಹ ಜೀವನ ನಡೆಸುತ್ತಿದ್ದ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ವ್ಯಾಪ್ತಿಯ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಮತ್ತೊಂದೆಡೆ ವೈದ್ಯರ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್​ ನಿಂದ ಚೇತರಿಸಿಕೊಂಡು ಮಗಳು ಹೊಸ ಜೀವನ ನಡೆಸಲು ಮುಂದಾಗಿದ್ದಳು. ಇದರ ನಡುವೆ ಮುದ್ದೇನಹಳ್ಳಿಗೆ ಬಂದಿದ್ದ ಸುರಭಿಯನ್ನು ಮತ್ತೆ ಬೆದರಿಸಿ, ಜತೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದರು. ನಂದಿ ಗಿರಿಧಾಮ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು.
ಡೈರಿ, ಪತ್ರ ಬರಹದ ವರದಿ ನಿರೀಕ್ಷೆ
ಸಾಯಿ ಸುರಭಿ ಮೃತಪಟ್ಟ ಕೊಠಡಿಯಲ್ಲಿ ಡೈರಿ ಹಾಗೂ ಪ್ರೇಮ ಬರಹದ ಪತ್ರಗಳು ಸಿಕ್ಕಿವೆ. ಇದನ್ನು ಯಾರು ಬರೆದಿದ್ದಾರೆ ಎನ್ನುವುದನ್ನು ದೃಢಪಡಿಸಿಕೊಳ್ಳಲು ಪ್ರಯೋಗಾಲಯ ಪರೀೆಗೆ ಕಳುಹಿಸಲಾಗಿದೆ. ಇನ್ನು ಮರಣೋತ್ತರ ಪರೀಾ ವರದಿಗಾಗಿಯೂ ಎದುರು ನೋಡಲಾಗುತ್ತಿದೆ. ಪ್ರಸ್ತುತ ವಿಷಕಾರಿ ವಸ್ತುಗಳ ಸೇವನೆಯಿಂದ ಸಾಯಿ ಸುರಭಿ ಮೃತಪಟ್ಟಿರುವುದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.
ಬೇಸರದ ಸಂದೇಶ
ಕೊಠಡಿಯಲ್ಲಿ ಲಭ್ಯವಾದ ಪತ್ರದಲ್ಲಿ ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ?, ಬೇರೆ ಬೇರೆ ಧರ್ಮದವರಾಗಿರುವುದರಿಂದ ನಮ್ಮಿಬ್ಬರಿಗೆ ಮದುವೆಯಾಗಲು ಬಿಡುತ್ತಿಲ್ಲ. ಇದು ತುಂಬಾ ಬೇಸರ ಮೂಡಿಸಿದೆ ಎಂಬ ಬರಹ ಇದ್ದು ಇದು ಸಂಚಿತ್​ ಆಲಿ ಬರೆದ ಪತ್ರ ಎನ್ನಲಾಗುತ್ತಿದೆ. ಇನ್ನು ಡೈರಿಯಲ್ಲಿ ಸಾಯಿ ಸುರಭಿ ಬರೆದ ಮಾದರಿ ಬರಹ ಇದೆ. ನಾನು ಜೀವಂತವಾಗಿರುವುದಕ್ಕೆ, ಆರೋಗ್ಯವಾಗಿರುವುದಕ್ಕೆ, ಮತ್ತೊಂದು ಬದುಕಿನ ಅವಕಾಶ ಸಿಕ್ಕಿರುವುದಕ್ಕೆ, ತಪ್ಪುಗಳನ್ನು ತಿದ್ದಿಕೊಂಡು ಹೊಸ ಜೀವನ ನಡೆಸುವ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆನ್ನುವುದರ ಅರಿವಾಗಿದೆ. ನನ್ನ ತಪ್ಪುಗಳು, ತಪ್ಪಾದ ವ್ಯಕ್ತಿಯನ್ನು ಮದುವೆಯಾಗುವುದರಿಂದ ದೂರವಿರಿಸಿರುವುದಕ್ಕೆ, ನನ್ನನ್ನು ದೇವರು, ಕುಟುಂಬ ಕಾಪಾಡಿದಕ್ಕೆ ಕೃತಜ್ಞತೆೆಯಿಂದ ಇರುವುದಾಗಿ ಬರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net