ಎಥೋಸ್ ಸೇಂಟ್ ಗೋಬೈನ್ ಟ್ರಾನ್ಸ್ಫರೆಂಟ್ ಸ್ಪರ್ಧೆಯಲ್ಲಿ RVCA 8ನೇ ಸೆಮಿಸ್ಟರ್ ವಿದ್ಯಾರ್ಥಿನಿ ಬೆನಿಟಾಗೆ ಪ್ರಥಮ ಬಹುಮಾನ!
ಆರ್ವಿಸಿಎ ಕಾಲೇಜಿನ ವಿದ್ಯಾರ್ಥಿ
Published on:
Copied
Follow Us
ಬೆಂಗಳೂರು: ಆರ್ವಿಸಿಎ ಕಾಲೇಜಿನ 8ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿ ಬೆನಿಟಾ ಆಲಿಸ್ ಜೇಕಬ್ ಅವರಿಗೆ ಎಥೋಸ್ ಸೇಂಟ್ ಗೋಬೈನ್ ಟ್ರಾನ್ಸ್ಫರೆಂಟ್ ಸ್ಪರ್ಧೆಯಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದಲ್ಲಿ ಪ್ರಥಮ ಬಹುಮಾನ ಒಲಿದಿದೆ.
ಇಂಟೀರಿಯರ್ ಡಿಸೈನ್ ವಿಭಾಗದಲ್ಲಿ ರಾಷ್ಟ್ರೀಯ ವಿಜೇತೆಯಾಗಿ ಹೊರಹೊಮ್ಮಿರುವ ಬೆನಿಟಾ ಅವರಿಗೆ 1,50,000 ರೂ. ನಗದು ಬಹುಮಾನ ನೀಡಲಾಗಿದೆ. ಇನ್ನು ಸೆಕೆಂಡ್ ನ್ಯಾಷನಲ್ ರನ್ನರ್ ಅಪ್ ಆಗಿ ಅಂಜಲಿ ವಿ. ಆಯ್ಕೆಯಾಗಿದ್ದು, ಅವರಿಗೆ 50,000 ರೂ. ನಗದು ಬಹುಮಾನ ದೊರೆತಿದೆ.
ದೇಶವ್ಯಾಪಿ ಹಲವು ಸಂಸ್ಥೆಗಳಿಂದ 200ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಆರ್ವಿಸಿಎ ಕಾಲೇಜಿನ ನಾಲ್ವರು ಟಾಪ್ 6ಗೆ ಆಯ್ಕೆಯಾಗಿದ್ದರು. ಇತ್ತೀಚೆಗಷ್ಟೇ, ಚೆನ್ನೈನಲ್ಲಿ ನಡೆದ ಫೈನಲ್ ಸುತ್ತಿನಲ್ಲಿ ಈ ಫಲಿತಾಂಶ ಘೋಷಣೆಯಾಗಿದೆ.