ಶನಿವಾರ, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ, ಇಂಡಿ ಮತ್ತು ದೇವರಹಿಪ್ಪರಗಿ ಎರಡು ತಾಲೂಕು ಕೇಂದ್ರಗಳಾಗಿದ್ದು, ಇಲ್ಲಿ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ನೌಕರರು, ಸಾರ್ವಜನಿಕರು ಪ್ರತಿನಿತ್ಯ ಸಂಚರಿಸುತ್ತಾರೆ. ಇಂಡಿ-ದೇವರಹಿಪ್ಪರಗಿ ಮಧ್ಯೆ ಹಲವಾರು ಗ್ರಾಮಗಳಿಗೆ ಸಾರ್ವಜನಿಕರು ತೆರಳಲು ಮತ್ತು ಹಳ್ಳಿಗಳಿಂದ ತಾಲೂಕು ಕೇಂದ್ರಗಳಿಗೆ ಹೋಗಲು ಮತ್ತು ಬರಲು ತೊಂದರೆಯಾಗುತ್ತಿದ್ದು, ಸರಿಯಾದ ಸಮಯಕ್ಕೆ ಬಸ್‌ಗಳು ಇರದೇ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ನೌಕರಸ್ಥರಿಗೆ ಹಾಗೂ ವ್ಯಾಪಾರ ವಹಿವಾಟುಗಳಿಗೆ ತುಂಬ ಸಮಸ್ಯೆಯಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಸ್‌ಗಳನ್ನು ಒದಗಿಸಬೇಕು. ಖಾಸಗಿ ವಾಹನಗಳ ಪ್ರಯಾಣ ತಪ್ಪಿಸುವಂತಾಗಬೇಕು. ಸರಿಯಾದ ಸಮಯಕ್ಕೆ ಬಸ್ ಓಡಾಟವಾದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.