ರಾಜ್ಯ ಮಾಹಿತಿ ಆಯೋಗವು 2005ರಿಂದ ಇಲ್ಲಿಯವರೆಗೆ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಕಾರ್ಯನಿರ್ವಹಿಸದ ರಾಜ್ಯದ 10,769 ಅಧಿಕಾರಿಗಳಿಗೆ ಒಟ್ಟು ರೂ. 10,25,66,450 ಗಳ ದಂಡ ವಿಧಿಸಿದೆ. ಈ ಪೈಕಿ 3,084 ಅಧಿಕಾರಿಗಳು ರೂ. 2,70,08,450 ಗಳನ್ನು ಪಾವತಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 95 ಜನ ಅಧಿಕಾರಿಗಳಿಗೆ ರೂ. 9,09,500 ಗಳ ದಂಡ ವಿಧಿಸಲಾಗಿದ್ದು, ಇದರಲ್ಲಿ 14 ಜನ ಅಧಿಕಾರಿಗಳು 1,15,000 ಗಳನ್ನು ಪಾವತಿಸಿದ್ದಾರೆ. ದಂಡಕ್ಕೆ ಒಳಗಾಗಿರುವ ಅಧಿಕಾರಿಗಳು ದಂಡ ಪಾವತಿಸದೇ ಇದ್ದಲ್ಲಿ ನಿವೃತ್ತಿ ಸೌಲಭ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.