ನಗರದಲ್ಲಿ 100 ಕಡೆ ಆರ್‌ಎಸ್‌ಎಸ್ ಪಥಸಂಚಲನ

ರಾಜ್ಯಾದ್ಯಂತ 250 ಕಡೆಗಳಲ್ಲಿ ವಿಜಯದಶಮಿ ಮೆರವಣಿಗೆ
Leader of the Opposition R. Ashoka, Chalavadi Narayanaswamy, and others participated in the RSS march held on the occasion of Vijayadashami.
ವಿಜಯದಶಮಿ ಅಂಗವಾಗಿ ನಡೆದ ಆರ್​ಎಸ್ಎಸ್ ಪಥಸಂಚಲನ ಕಾರ್ಯಕ್ರಮದಲ್ಲಿ ವಿಪಕ್ಷನಾಯಕರಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
Published on: 

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಭಾನುವಾರ ರಾಜಧಾನಿ ಬೆಂಗಳೂರಿನ ವಿವಿಧೆಡೆ ವಿಜಯದಶಮಿ ಅಂಗವಾಗಿ ಪಥಸಂಚಲನ ಹಾಗೂ ಸಂಘಟನೆಯ ಕಾರ್ಯಕ್ರಮಗಳನ್ನು ನಡೆಸಲಾಯಿತು.

ನಗರದ ವಿವಿಧ ಬಡಾವಣೆಗಳಲ್ಲಿ ಸ್ವಯಂಸೇವಕರು ಸಮವಸ್ತ್ರ ಧರಿಸಿ ಶಿಸ್ತಿನೊಂದಿಗೆ ಪಥಸಂಚಲನ ನಡೆಸಿದರು. ವಿಜಯನಗರ, ಕೆಂಗೇರಿ, ಜಯನಗರ, ಜೆ.ಪಿ.ನಗರ, ರಾಜಾಜಿನಗರ, ಮಲ್ಲೇಶ್ವರಂ ಹಾಗೂ ಮೆಜೆಸ್ಟಿಕ್, ಚಿಕ್ಕಪೇಟೆ, ಯಲಹಂಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಥಸಂಚಲನಗಳನ್ನು ಆಯೋಜಿಸಲಾಗಿತ್ತು. ಅ.18ರಿಂದ ಆರಂಭವಾಗಿರುವ ದಸರಾ ಪಥಸಂಚಲನ ನ.1ರವರೆಗೆ ನಡೆಯಲಿದ್ದು, ಭಾನುವಾರ ಗರಿಷ್ಠ ಪ್ರಮಾಣದಲ್ಲಿ ಕಾರ್ಯಕ್ರಮ ನಡೆದಿದೆ. ಭಾನುವಾರ ಒಂದೇ ದಿನ ನಗರದಲ್ಲಿ ಸುಮಾರು 100 ಪಥಸಂಚಲನಗಳು ನಡೆದಿದ್ದು, ಸಾವಿರಾರು ಸ್ವಯಂಸೇವಕರು ಭಾಗವಹಿಸಿದ್ದರು.

ಜಯನಗರದಲ್ಲಿ ನಡೆದ ಪಥಸಂಚಲನದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪಾಲ್ಗೊಂಡಿದ್ದರು. ಮಲ್ಲೇಶ್ವರಂನ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಮತ್ತಿತರ ಬಿಜೆಪಿ ನಾಯಕರು ಭಾಗವಹಿಸಿದ್ದರು.

On the occasion of Vijayadashami, a route march was organized on Sunday by the Yelahanka Maruti Nagar unit. Approximately 400 volunteers participated.
ವಿಜಯದಶಮಿ ಅಂಗವಾಗಿ ಯಲಹಂಕ ಮಾರುತಿ ನಗರ ಘಟಕ ವತಿಯಿಂದ ಭಾನುವಾರ ಪಥಸಂಚಲನ ನೆರವೇರಿತು. ಸುಮಾರು 400 ಸ್ವಯಂ ಸೇವಕರು ಭಾಗವಹಿಸಿದ್ದರು.

ರಾಜ್ಯದ ವಿವಿಧೆಡೆಯೂ ಪಥಸಂಚಲನ

ಇದೇ ವೇಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಕಾರ್ಯಕ್ರಮಗಳು ನಡೆದಿದ್ದು, ಕೆಲವು ಕಡೆ ಪೊಲೀಸ್ ಅನುಮತಿ ಸಂಬಂಧಿತ ಸಮಸ್ಯೆಯಿಂದಾಗಿ ಪಥಸಂಚಲನ ಮುಂದೂಡಿಕೆ ಹಾಗೂ ರದ್ದಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾನುವಾರ ಸುಮಾರು 250 ಕಡೆಗಳಲ್ಲಿ ಕಾರ್ಯಕ್ರಮ ನಡೆಯಿತು.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಪಥಸಂಚಲನ ಹಾಗೂ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದರು. ಕಲಬುರಗಿಯಲ್ಲಿ ನಗರೇಶ್ವರ ಶಾಲೆಯಿಂದ ಶರಣಬಸವೇಶ್ವರ ಜಾತ್ರಾ ಮೈದಾನದವರೆಗೆ ಷರತ್ತುಬದ್ಧ ಅನುಮತಿ ಮೇರೆಗೆ ಪಥಸಂಚಲನ ನಡೆಸಲಾಯಿತು. ಮೈಸೂರಿನಲ್ಲಿಯೂ ಪಥಸಂಚಲನ ಮತ್ತು ಬೌದ್ಧಿಕ್ ಕಾರ್ಯಕ್ರಮ ನಡೆಯಿತು.

ರಾಮನಗರದಲ್ಲಿ ಆರ್‌ಎಸ್‌ಎಸ್ ಕಚೇರಿಯಿಂದ ಅಗ್ರಹಾರದವರೆಗೆ ಪಥಸಂಚಲನ ನಡೆಸಲು ಅನುಮತಿ ನೀಡಲಾಗಿತ್ತು. ವಿವಿಧೆಡೆ ಪೊಲೀಸರು ಭದ್ರತೆ ಹಾಗೂ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net