ಸರ್ಕಾರಿ ಶಾಲೆ ನಿರ್ಮಾಣಕ್ಕೆ 2.50 ಕೋಟಿ ರೂ. ದಾನ / ANEKAL
ಆನೇಕಲ್ ತಾಲೂಕಿನ ನೆರಳೂರು ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಕಾಮಗಾರಿಗೆ ಶಾಸಕ ಬಿ.ಶಿವಣ್ಣ ಭೂಮಿ ಪೂಜೆ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗುರುಮೂರ್ತಿ, ದಾನಿಗಳಾದ ಯಲ್ಲಾರೆಡ್ಡಿ ಕುಟುಂಬಸ್ಥರು, ಸ್ಥಳಿಯ ಜನಪ್ರತಿನಿಧಿಗಳಾದ ನಾರಾಯಣಸ್ವಾಮಿ, ವೆಂಕಟೇಶ್, ಅನಂತ್, ಪಿಳ್ಳಪ್ಪ, ಗ್ರಾಪಂ ಅಧಿಕಾರಿಗಳು ಇದ್ದರು.
Published on:
Copied
Follow Us
ಆನೇಕಲ್: ದಾನಿಗಳು ಸಹಕಾರ, ದೇಣಿಗೆ ನೀಡುವುದರಿಂದ ಸರ್ಕಾರಿ ಶಾಲೆ ಉನ್ನತಿಕರಣಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ತಾಲೂಕಿನ ನೆರಳೂರು ಗ್ರಾಪಂ ವ್ಯಾಪ್ತಿಯ ತಿರುಮಗೊಂಡನಹಳ್ಳಿಯಲ್ಲಿ ಗುರುವಾರ ಸರ್ಕಾರಿ ಶಾಲೆಯ ಆವರಣದಲ್ಲಿ ದಾನಿ ಯಲ್ಲಾರೆಡ್ಡಿ ಸ್ವಂತ ಹಣದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದ 12 ಕೊಠಡಿಗಳ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆನೇಕಲ್ ತಾಲೂಕು ಗಡಿಭಾಗದಲ್ಲಿದ್ದು, ಈ ಭಾಗದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿ ಜತೆಗೆ ದಾನಿಗಳು ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಹಿರಿಯ ಯಲ್ಲಾರೆಡ್ಡಿ ಮಾತನಾಡಿ, ಶಾಲೆಯಲ್ಲಿ ಉತ್ತಮ ಕಟ್ಟಡ ನಿಮಾರ್ಣ ಆಗಬೇಕು. ಸರ್ಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರಬೇಕು ಎನ್ನುವ ನಿಟ್ಟಿನಲ್ಲಿ ಈ ರ್ನಿಣಯಕ್ಕೆ ಬರಲಾಗಿದ್ದು, ಉತ್ತಮ ಕಾಮಗಾರಿ ಮಾಡಲಾಗುವುದು ಎಂದು ಹೇಳಿದರು.