ಭೂಸನೂರ ಅಭಿವೃದ್ಧಿಗೆ ರು.22.55 ಕೋಟಿ ಅನುದಾನ

ಆಳಂದ ತಾಲೂಕಿನ ಭೂಸನೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಆರ್​.ಪಾಟೀಲ್​ ಮಾತನಾಡಿದರು. ಶ್ರೀ ಶಂಭು ಸೋಮನಾಥ ಶಿವಾಚಾರ್ಯ, ಮುತ್ತಣ್ಣ ಬಿಳಗಿ, ಹೊನ್ನೇಶ್​, ಅನಂತರಾಜ ಸಾಹು, ಸಿದ್ದರಾಮ ಪ್ಯಾಟಿ ಇತರರಿದ್ದರು.
ಆಳಂದ ತಾಲೂಕಿನ ಭೂಸನೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಆರ್​.ಪಾಟೀಲ್​ ಮಾತನಾಡಿದರು. ಶ್ರೀ ಶಂಭು ಸೋಮನಾಥ ಶಿವಾಚಾರ್ಯ, ಮುತ್ತಣ್ಣ ಬಿಳಗಿ, ಹೊನ್ನೇಶ್​, ಅನಂತರಾಜ ಸಾಹು, ಸಿದ್ದರಾಮ ಪ್ಯಾಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಆರ್​.ಪಾಟೀಲ್​ ಹೇಳಿಕೆ
  • ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ
ಆಳಂದ: ಭೂಸನೂರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಈವರೆಗೂ 22.55 ಕೋಟಿ ರೂ. ಅನುದಾನದೊಂದಿಗೆ ವಿವಿಧ ಕಾಮಗಾರಿ ಮಾಡಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲವಾಗಿದ್ದು, ನೂತನ ಕೊಠಡಿ ನಿಮಾರ್ಣಕ್ಕೆ 1 ಕೋಟಿ ರೂ. ಹಾಗೂ ಗ್ರಾಮದಲ್ಲಿ ಸಿಸಿ ರಸ್ತೆ ನಿಮಾರ್ಣಕ್ಕೆ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಬಿ.ಆರ್​.ಪಾಟೀಲ್​ ಹೇಳಿದರು.
ಭೂಸನೂರಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಚುನಾವಣೆ ವೇಳೆ ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಶಿಕ್ಷಣದಿಂದಲೇ ಶಕ್ತಿ ಎಂಬ ಉದ್ದೇಶದಿಂದ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಖರ್ಚು ಮಾಡಿದ್ದೇನೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಅಗತ್ಯ ಸೌಕರ್ಯ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಶ್ರೀ ಶಂಭು ಸೋಮನಾಥ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಅನಂತರಾಜ ಸಾಹು, ಬಸವರಾಜ ಪಾಟೀಲ್​ ಗೋಳಾ, ವೀರಣ್ಣ ಹೊನ್ನಶೆಟ್ಟಿ, ಸಿದ್ದರಾಮ ಪ್ಯಾಟಿ, ಬಾಬುರಾವ ಅರುಣೋದಯ, ಹುಲಿಕಂಠರಾಯ, ಮುತ್ತಣ್ಣ ಬಿಳಗಿ, ರಾಜಶೇಖರ ಯಂಕಂಚಿ, ಮಹಾಂತಪ್ಪ ಯಲಶೆಟ್ಟಿ, ಬಾಬು ಗೊಬ್ಬುರ, ಗುರುಶಾಂತಪ್ಪ ಪಾಟೀಲ್​ ಇತರರಿದ್ದರು.
ಮನವಿ ಬಳಿಕವೂ ಪರಿಹಾರ ಬಾರದಿದ್ರೆ
ಗ್ರಾಹಕರ ಕೋರ್ಟ್​ಗೆ ಹೋಗೋಣ
ಕ್ಷೇತ್ರದ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆವಿಮೆ ಪರಿಹಾರದ ಎರಡನೇ ಕಂತಿನ ಹಣ ಬಾರದಿರುವುದಕ್ಕೆ ಕೃಷಿ ಹಾಗೂ ಕಂದಾಯ ಅಧಿಕಾರಿಗಳ ರ್ನಿಲಕ್ಷವೇ ಕಾರಣ ಎಂದು ಶಾಸಕ ಬಿ.ಆರ್​.ಪಾಟೀಲ್​ ದೂರಿದರು. ಕಳೆದ ಮೂರು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಪರಿಹಾರ ಬಂದಿದೆ. ಈ ವರ್ಷ ಪರಿಪೂರ್ಣತೆಯಿಂದ ಹಣ ಬಂದಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಅವರಿಗೆ ಪತ್ರ ಬರೆದಿದ್ದೇನೆ. ಅಲ್ಲದೆ ಖುದ್ದಾಗಿ ಅವರನ್ನು ಭೇಟಿ ಮಾಡಿ ಚರ್ಚಿಸುವೆ. ಇಷ್ಟೆಲ್ಲ ಆದ ಬಳಿಕವೂ ಹಣ ಬಾರದಿದ್ದರೆ ಗ್ರಾಹಕರ ನ್ಯಾಯಾಲಯದಲ್ಲಿ ರೈತರೆಲ್ಲರೂ ಸೇರಿ ಮೊಕದ್ದಮೆ ದಾಖಲಿಸೋಣ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net