

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು :ಸುಮಾರು 50ವರ್ಷದ ಖಾಸಗಿಸಂಸ್ಥೆಯ ಉದ್ಯೋಗಿಯೊಬ್ಬರು 4ಜಿಸಿಮ್ ಅನ್ನು ಉಚಿತವಾಗಿ 5ಜಿಗೆಅಪ್‌ಗ್ರೇಡ್ ಮಾಡಿಕೊಡುವುದಾಗಿಕರೆ ಮಾಡಿದ ಸೈಬರ್ ವಂಚಕರ ಬಲೆಗೆಬಿದ್ದು 15 ಲಕ್ಷರೂ. ಸಾಲದಹೊರೆ ಹೊತ್ತ ವಿಚಿತ್ರ ಘಟನೆನಡೆದಿದೆ.
ಟೆಲಿಕಾಂ ಕಂಪನಿಯಅಧಿಕಾರಿಯೆಂದು ಪರಿಚಯಿಸಿಕೊಂಡವ್ಯಕ್ತಿ, ನಿಮ್ಮಸಿಮ್ ಅನ್ನು ಇ-ಸಿಮ್ಗೆಪರಿವರ್ತಿಸಲು ಅಗತ್ಯವಿದೆ ಎಂದುಹೇಳಿ, ಸಂತ್ರಸ್ತರಿಂದಇಐಡಿ ಸಂಖ್ಯೆ ಸೇರಿದಂತೆ ಅಗತ್ಯಮಾಹಿತಿಗಳನ್ನು ಪಡೆದುಕೊಂಡಿದ್ದಾನೆ.ಬಳಿಕ ವಂಚಕರುಸಂತ್ರಸ್ತರ ಮೊಬೈಲ್ ಸಂಖ್ಯೆಯನ್ನುತಮ್ಮ ಸಾಧನದಲ್ಲಿ ಇ-ಸಿಮ್ಆಗಿ ಸಕ್ರಿಯಗೊಳಿಸಿಕೊಂಡು,ಸಂತ್ರಸ್ತರ ಇ-ಮೇಲ್ಖಾತೆ ಹಾಗೂ ಬ್ಯಾಂಕ್ ಖಾತೆಯ ಮೇಲಿನನಿಯಂತ್ರಣ ಸಾಧಿಸಿ ಅವರ ಹೆಸರಿನಲ್ಲಿಬ್ಯಾಂಕಿನಿಂದ 15ಲಕ್ಷ ರೂ.ತ್ವರಿತ ಸಾಲಮಂಜೂರಾಗುವಂತೆ ಮಾಡಿದ್ದಾರೆ.ಮಂಜೂರಾದ ಹಣದಲ್ಲಿ14.6 ಲಕ್ಷರೂಪಾಯಿಯನ್ನು ಖಾತೆಗೆ ಜಮಾಮಾಡಿಸಿಕೊಂಡಿದ್ದಾರೆ.ಅಲ್ಲದೆ ಸುಮಾರುರೂ. 2.1 ಲಕ್ಷಹಣವನ್ನು ಕೆಲವೇ ನಿಮಿಷಗಳಲ್ಲಿಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ತಮ್ಮ ಬ್ಯಾಂಕ್ಖಾತೆ ದುರುಪಯೋಗವಾಗಿರುವುದುತಿಳಿದ ತಕ್ಷಣ ಸಂತ್ರಸ್ತರು ಸೈಬರ್ಸಹಾಯವಾಣಿ ಹಾಗೂ ಬ್ಯಾಂಕ್‌ಗೆದೂರು ನೀಡಿದ್ದಾರೆ.ಸೋಮವಾರ (ಜೂ.15) ಕೇಂದ್ರ ಸೈಬರ್ಕ್ರೈಂ ಪೊಲೀಸ್ ಠಾಣೆಯಲ್ಲಿ ಈಬಗ್ಗೆ ಅಧಿಕೃತ ದೂರು ದಾಖಲಾಗಿದೆ.
ಪೊಲೀಸರ ಪ್ರಕಾರ,ಇ-ಸಿಮ್ಪರಿವರ್ತನೆ ವೇಳೆ ಮೊಬೈಲ್ ಸೆಟ್‌ನ್ನುಆಯ್ಕೆ ಮಾಡುವ ಅವಕಾಶವನ್ನು ವಂಚಕರುದುರುಪಯೋಗಪಡಿಸಿಕೊಂಡು ತಮ್ಮಹ್ಯಾಂಡ್ ಸೆಟ್‌ನಲ್ಲೇ ಸಿಮ್ಅನ್ನು ಸಕ್ರಿಯಗೊಳಿಸಿಕೊಂಡುನಂತರ ಬ್ಯಾಂಕಿಂಗ್ ವಿವರಗಳನ್ನುಕದ್ದು ಸಾಲ ಪಡೆದು ಹಣ ವರ್ಗಾಯಿಸಿದ್ದಾರೆ.ಮಾಹಿತಿ ತಂತ್ರಜ್ಞಾನಕಾಯ್ದೆ ಹಾಗೂ ಭಾರತೀಯ ನ್ಯಾಯಸಂಹಿತೆ (ಬಿಎನ್‌ಎಸ್)ಕಲಂ 318ರಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಳ ಪತ್ತೆಹಾಗೂ ಹಣವನ್ನು ಫ್ರೀಜ್ ಮಾಡುವಕಾರ್ಯ ನಡೆಯುತ್ತಿದೆ.