12.71 ಲಕ್ಷ ರೂ. ಸಂಗ್ರಹ

ಕಾಳಗಿ ತಾಲೂಕಿನ ಕೋರವಾರದ ಶ್ರೀ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆಯಿತು.
ಕಾಳಗಿ ತಾಲೂಕಿನ ಕೋರವಾರದ ಶ್ರೀ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಅಣಿವೀರಭದ್ರೇಶ್ವರನ ಹುಂಡಿಯಲ್ಲಿ

ಕಾಳಗಿ: ಹಿಂದು ಧಾರ್ಮಿಕ ದತ್ತಿ ಇಲಾಖೆಯ ಕೋರವಾರದ ಶ್ರೀ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 12.71 ಲಕ್ಷ ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗ ಖೇಮಶೆಟ್ಟಿ ತಿಳಿಸಿದರು. ಜ.20ರಿಂದ ಆ.19ರ ವರೆಗಿನ ಅವಧಿಯಲ್ಲಿ ಸಂಗ್ರಹವಾದ ಹುಂಡಿಯನ್ನು ಬೆಳಗ್ಗೆ ಸಿಬ್ಬಂದಿ ಸಹಾಯದಿಂದ ಎಣಿಕೆ ಮಾಡಲಾಯಿತು. 12,71,330 ರೂ. ನಗದು, 47 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ನಗದನ್ನು ಹೆಬ್ಬಾಳದ ಕರ್ನಾಟಕ ಗ್ರಾಮೀಣ ಬ್ಯಾಂಕ್​ನ ದೇವಸ್ಥಾನ ಖಾತೆಗೆ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ತಹಸೀಲ್ದಾರ್​ ಪೃಥ್ವಿರಾಜ ಪಾಟೀಲ್​, ಗ್ರೇಡ್​-2 ತಹಸೀಲ್ದಾರ್​ ರಾಜೇಶ್ವರಿ, ಶಿರಸ್ತೆದಾರರಾದ ಮಾಣಿಕ ಘತ್ತರಗಿ, ನಸೀರ್​ ಅಹ್ಮದ್​, ಕಂದಾಯ ನಿರೀಕ್ಷಕ ರವೀಂದ್ರನಾಥ ಮುತ್ತಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net