ಬಿಐಟಿ ಕೌಶಲ ಅಭಿವೃದ್ಧಿಗೆ 10 ಲಕ್ಷ ರೂ.ದೇಣಿಗೆ

ಒಕ್ಕಲಿಗರ ಸಂಘದ ಬಿಐಟಿ ಹಿರಿಯ ವಿದ್ಯಾರ್ಥಿಯ ಕೊಡುಗೆ
B. Krishnappa, a senior student, presented a cheque for Rs. 10 as a donation to the Skill Development Laboratory at the Bangalore Institute of Technology (BIT). L. Srinivas and B. Kenchappa Gowda of the Vokkaligara Sangha, along with others, were present.
ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ (ಬಿಐಟಿ)ದ ಕೌಶಲ ಅಭಿವೃದ್ಧಿ ಪ್ರಯೋಗಾಲಯಕ್ಕೆ ಹಿರಿಯ ವಿದ್ಯಾರ್ಥಿ ಬಿ.ಕೃಷ್ಣಪ್ಪ 10 ರೂ. ದೇಣಿಗೆ ಚೆಕ್ ನೀಡಿದರು. ಒಕ್ಕಲಿಗರ ಸಂಘದ ಎಲ್.ಶ್ರೀನಿವಾಸ್, ಬಿ.ಕೆಂಚಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.
Published on: 

ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘದ ಅದೀನ ಸಂಸ್ಥೆಯಾದ ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ (ಬಿಐಟಿ)ದ ಹಿರಿಯ ವಿದ್ಯಾರ್ಥಿ ಹಾಗೂ ಪ್ಯಾರಾಮೌಂಟ್ ನ್ಯೂಟ್ರಿಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ. ಕೃಷ್ಣಪ್ಪ ಸಂಸ್ಥೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಬಿಐಟಿಯ ನೂತನ ಕಟ್ಟಡದಲ್ಲಿ ಸ್ಥಾಪಿಸಲಿರುವ ಉತ್ಕೃಷ್ಟತಾ ಕೇಂದ್ರ ಮತ್ತು ಕೌಶಲ ಅಭಿವೃದ್ಧಿ ಪ್ರಯೋಗಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ, ಆರ್ಥಿಕವಾಗಿ ಹಿಂದುಳಿದ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ವಿದ್ಯಾರ್ಥಿ ವಸತಿ ನಿಲಯವನ್ನು ನಿರ್ಮಿಸಲು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಚಿಂತನೆ ನಡೆಸಿದ್ದು, ಅದನ್ನು ಮಾಡುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಗೌರವಾಧ್ಯಕ್ಷ ಬಿ.ಕೆಂಚಪ್ಪ ಗೌಡ, ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಎನ್.ಬಾಲಕೃಷ್ಣ, ಬಿಐಟಿ ಅಧ್ಯಕ್ಷ ಅಶೋಕ್ ಎಸ್.ಡಿ. ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.