ಮೃತ ಮೀನುಗಾರ ಕುಟುಂಬಕ್ಕೆ ರು.೧೦ ಲಕ್ಷ ಪರಿಹಾರ

ಭೀಮಾ ನದಿಯಲ್ಲಿ ಮಿನು ಹಿಡಿಯುವಾಗ ಬಲೆಗೆ ಸಿಲುಕಿ ಮೃತಪಟ್ಟಿದ್ದ ಹಣಮಂತನ ಕುಟುಂಬಕ್ಕೆ ತಳಕನಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಂಗಳವಾರ ೧೦ ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಡಿಡಿ ಶರಣಬಸವ, ಉಮೇಶ ಮುದ್ನಾಳ್ ಇತರರಿದ್ದರು.
ಭೀಮಾ ನದಿಯಲ್ಲಿ ಮಿನು ಹಿಡಿಯುವಾಗ ಬಲೆಗೆ ಸಿಲುಕಿ ಮೃತಪಟ್ಟಿದ್ದ ಹಣಮಂತನ ಕುಟುಂಬಕ್ಕೆ ತಳಕನಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಂಗಳವಾರ ೧೦ ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಡಿಡಿ ಶರಣಬಸವ, ಉಮೇಶ ಮುದ್ನಾಳ್ ಇತರರಿದ್ದರು.
Published on
ಯಾದಗಿರಿ: ಭೀಮಾ ನದಿಯಲ್ಲಿ ಜು.೯ರಂದು ಮೀನು ಹಿಡಿಯಲು ಹೋಗಿ ಬಲೆಗೆ ಸಿಕ್ಕು ಮೃತಪಟ್ಟಿದ್ದ ತಳಕ ಗ್ರಾಮದ ಹಣಮಂತ ಕುಟುಂಬಸ್ಥರಿಗೆ ಮಂಗಳವಾರ ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ೧೦ ಹತ್ತು ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.
ಗ್ರಾಮದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೃತನ ತಂದೆ ಚಂದಪ್ಪ ಅವರಿಗೆ ಚೆಕ್ ನೀಡಿ ಮಾತನಾಡಿದ ಅವರು, ಈ ಹಣದಲ್ಲಿ ಹೊಲ ಖರೀದಿಸಿ ವ್ಯವಸಾಯ, ವ್ಯವಹಾರ ಮಾಡಿ ಇಲ್ಲವೇ ಬ್ಯಾಂಕಿನಲ್ಲಿ ಡಿಪಾಜಿಟï ಇಡಿ. ಅನವಶ್ಯಕವಾಗಿ ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಹೇಳಿದರು.
ಹೆತ್ತವರ ಮುಂದೆ ಮಕ್ಕಳು ಸಾಯಬಾರದು. ಈ ದುಃಖ ಕೊನೆಯವರೆಗೂ ತಂದೆ-ತಾಯಿಯ ಜೀವ ಹಿಂಡುತ್ತದೆ. ಹಣಮಂತ ಇಲ್ಲ ಎಂಬ ಕೊರಗು ಬೇಡ. ನಾವೆಲ್ಲರೂ ನಿಮ್ಮ ಜತೆ ಸದಾ ಇರುತ್ತೇವೆ ಎಂದು ಧೈರ್ಯ ತುಂಬಿದರು. ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶರಣಬಸವ ಮಾತನಾಡಿ, ಶಾಸಕ ತುನ್ನೂರ, ಉಮೇಶ ಮುದ್ನಾಳ್ ಅವರ ಪ್ರಯತ್ನ ಹಾಗೂ ಇಲಾಖೆ ಹಿರಿಯ ಅಽಕಾರಿಗಳಿಂದ ಪರಿಹಾರ ನೀಡುವ ಕೆಲಸವಾಗಿದ್ದು, ಹಣ ಪೋಲಾಗದಂತೆ ನೋಡಿಕೊಳ್ಳಿ. ಮೀನುಗಾರಿಕೆ ವೇಳೆ ಎಚ್ಚರ ವಹಿಸುವುದು ಮುಖ್ಯ ಎಂದರು.
ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಉಮೇಶ ಮುದ್ನಾಳ್ ಮಾತನಾಡಿ, ಬಡ ಹಣಮಂತನ ಸಾವು ಎಲ್ಲರಿಗೂ ನೋವು ತಂದಿದೆ. ಘಟನೆ ಸಂಭವಿಸಿದ ತಕ್ಷಣ ಶಾಸಕರು, ಸಂಬAಧಪಟ್ಟ ಅಽಕಾರಿಗಳ ಗಮನಕ್ಕೆ ತಂದಿದ್ದು, ಎಲ್ಲರೂ ಸೇರಿ ಈ ಬಹುದೊಡ್ಡ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಮೀನುಗಾರಿಕೆ ಇಲಾಖೆ ತಾಲೂಕು ಅಽಕಾರಿ ಶಂಕರ ಗೊಂಡಳ್ಳಿ, ಸಹಾಯಕಿ ಭಾಗ್ಯ, ಗ್ರಾಮದ ಮುಖಂಡರಾದ ಶರಣಭೋಪಾಲರೆಡ್ಡಿ ಬಸಣ್ಣ, ರಾಜಪ್ಪ, ದೊಡ್ಡಪ್ಪಗೌಡ, ಶಿವಪ್ಪ, ಬಸವರಾಜ, ಮಹೇಶ, ಗಂಗಣ್ಣ, ಬಸರೆಡ್ಡಿ, ಮರೆಪ್ಪ, ಪವನ, ಯಲ್ಲಪ್ಪ, ಯಂಕಪ್ಪ, ಸಾಬಣ್ಣ, ಚಂದಪ್ಪ, ಆನಂದ ಇತರರಿದ್ದರು.
"

ಮೀನುಗಾರಿಕೆ ವೇಳೆ ಸಂಭವಿಸುವ ದುರಂತದಲ್ಲಿ ಮಡಿದವರಿಗೆ ಈ ಮೊದಲು ೩-೪ ಲಕ್ಷ ರೂ. ಪರಿಹಾರ ಸಿಗುತ್ತಿತ್ತು. ಆದರೆ ಮಂಕಾಳು ವೈದ್ಯ ಅವರು ಮೀನುಗಾರಿಕೆ ಸಚಿವರಾದ ಬಳಿಕ ೬ ಲಕ್ಷ ರೂ.ಗೆ ಪರಿಹಾರ ಏರಿಸಿದ್ದರು. ಇದೀಗ ೧೦ ಲಕ್ಷಕ್ಕೆ ಏರಿಸಿ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ.| ಶರಣಬಸವ ಉಪ ನಿರ್ದೇಶಕ, ಮಿನುಗಾರಿಕೆ ಇಲಾಖೆ

"

ಮೃತ ಮೀನುಗಾರ ಹಣಮಂತ ಕುಟುಂಬಕ್ಕೆ ಕೆಲವೇ ದಿನಗಳಲ್ಲಿ ೧೦ ಲಕ್ಷ ರೂ. ಪರಿಹಾರ ಕೊಡಿಸುವಲ್ಲಿ ಹಿಂದೆ ಇಲಾಖೆ ಆಯುಕ್ತರ ಕಾಳಜಿ ಪ್ರಮುಖವಾಗಿದ್ದು, ತಳಕ ಗ್ರಾಮಸ್ಥರ ಪರವಾಗಿ ಧನ್ಯವಾದ ಹೇಳುವೆ.| ಚನ್ನಾರೆಡ್ಡಿ ಪಾಟೀಲ್ ತುನ್ನೂರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net