ಕಿಲ್ಲಾದಲ್ಲಿನ ಹುಸೇನಿ ಆಲಂ ದರ್ಗಾ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ವೆಂಕಟರಾಯನ ಪೇಟೆಯ ಕಾಸೀಂ ಪೀರ್ ದರ್ಗಾ, ಬೇಗಂಪುರ ಪೇಟೆಯ ಮೌಲಾಲಿ ದರ್ಗಾ, ಹಳೆಪೇಟೆ ಮತ್ತು ಮೇಗಳಪೇಟೆ ಸೇರಿದಂತೆ ಇತರ ದರ್ಗಾಗಳಲ್ಲಿಯೂ ಆಲಂಗಳಿಗೆ ಹೂಗಳ ಅಲಂಕಾರ, ಸಕಲ ವಾದ್ಯಮೇಳಗಳೊಂದಿಗೆ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು.