ಮೂತ್ರಪಿಂಡ ಕಸಿ, ಕ್ಯಾನ್ಸರ್ ಹಾಗೂ ಮೂತ್ರಕೋಶ ಸಮಸ್ಯೆಗೆ ಒಳಗಾದವರಿಗೆ ರೋಬಾಟಿಕ್ ಶಸ್ತ್ರಚಿಕಿತ್ಸೆ ಸಹಕಾರಿಯಾಗಲಿದೆ. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ರೋಬಾಟಿಕ್ ಹೆಚ್ಚು ನಿಖರ ಹಾಗೂ ಪರಿಣಾಮಕಾರಿ ಆಗಿದೆ. ಕಡಿಮೆ ರಕ್ತಸ್ರಾವದೊಂದಿಗೆ ಅಲ್ಪಾವಧಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದ್ದು, ರೋಗಿಯ ಆಸ್ಪತ್ರೆ ವಾಸವೂ ಕಡಿಮೆಯಾಗಿ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಡಾ. ಎಂ. ಶಿವಲಿಂಗಯ್ಯ.