ಬೆಸ್ಕಾಂ ಜೆಇ ಮನೆಯಲ್ಲಿ ದರೋಡೆ

Robbery at BESCOM JE's house
Robbery at BESCOM JE's house
Published on

ಚಿಂತಾಮಣಿ:

ನಗರದ ಗುಂಡಪ್ಪ ಬಡಾವಣೆಯಲ್ಲಿ ಬೆಸ್ಕಾಂ ಜೆಇ ಚೇತನ್​ ರೆಡ್ಡಿ ಅವರ ಮನೆಯ ಬಾಗಿಲು ಮುರಿದ ಕಳ್ಳರು, ನಗದು, ಬೆಳ್ಳಿ ಆಭರಣ ಹಾಗೂ ಅಡುಗೆ ಮನೆಯ ವಸ್ತುಗಳನ್ನು ದೋಚಿದ್ದಾರೆ.

ಚೇತನ್​ ರೆಡ್ಡಿ ಕುಟುಂಬ ಸಮೇತ ಊರಿಗೆ ತೆರಳಿದ್ದನ್ನು ಗಮನಿಸಿದ ಕಳ್ಳರು, ಮನೆಯ ಹಿಂದಿನ ಬಾಗಿಲನ್ನು ಸಲಾಕೆಗಳಿಂದ ಶಬ್ದ ಬಾರದಂತೆ ಮೀಟಿ ಒಳನುಗ್ಗಿದ್ದಾರೆ. ಭಾನುವಾರ ಚೇತನ್​ ರೆಡ್ಡಿ ಮರಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

15 ಸಾವಿರ ನಗದು ಹಾಗೂ ದೇವರ ಕೋಣೆಯಲ್ಲಿದ್ದ ಸುಮಾರು 1.5 ಲ ಮೌಲ್ಯದ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ.

ಅಷ್ಟೇ ಅಲ್ಲದೆ ಅಡುಗೆ ಮನೆಯಲ್ಲಿದ್ದ ವಾಟರ್​ ಫಿಲ್ಟರ್​, ಮಿಕ್ಸಿ ಹಾಗೂ ಕುಕ್ಕರ್​ ಸೇರಿ ಹಲವು ಗೃಹೋಪಯೋಗಿ ವಸ್ತುಗಳನ್ನೂ ಕದ್ದೊಯ್ದಿದ್ದಾರೆ. ನಗರ ಠಾಣೆ ಪಿಎಸ್​ಐ ಪ್ರಕಾಶ್​ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net